ಮಹಿಳೆಯರು ಸಂಕಷ್ಟಕ್ಕೆ ಎದೆಗುಂದಬಾರದು : ಶಿಕ್ಷಕಿ, ಸಾಹಿತಿ ಸೊನ್ನದ
ಇಂಡಿ: ‘ಮಹಿಳೆಯರು ಸರಳ, ಸ್ವಾವಲಂಬನೆಯ ಜೀವನಶೈಲಿಗೆ ಒತ್ತು ನೀಡಿದರೆ ಕುಟುಂಬ ಹಾಗೂ ಸಮಾಜದಲ್ಲಿ ಸಮಾಜದಲ್ಲಿ ಸಮೃದ್ಧಿ ನೆಲೆಸಲಿದೆ ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದ ತಿಳಿಸಿದರು.
ಭಾನುವಾರ ಪಟ್ಟಣದ ಸಿಂದಗಿ ರಸ್ತೆಯ ಖಾಸಗಿ ಸಭಾಭವನದಲ್ಲಿ ತಳವಾರ ಮಹಿಳಾ ಸ್ವ ಸಹಾಯ ಸಂಘದ ಅಡಿಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಆಚರಣೆ ಹಾಗೂ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು.
‘ಬೆಲೆ ಬಾಳುವ ವಸ್ತ್ರ ಹಾಗೂ ಒಡವೆ ಧರಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಲಭಿಸುವುದಿಲ್ಲ. ಸಾಧನೆಯಿಂದ ಮಹಿಳೆಯರಿಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮನೋಬಲ ರೂಢಿಸಿಕೊಳ್ಳಬೇಕು’ ಎಂದರು.
ಸಂಘದ ಅಧ್ಯಕ್ಷೆ ಭಕ್ತಿ ಜಮಾದಾರ, ಉಪಾಧ್ಯಕ್ಷೆ ಪವಿತ್ರ ನಾಲವರ, ಕಾರ್ಯದರ್ಶಿ ದೀಪಿಕಾ ಸಾತಿಹಾಳ, ಕವಿತಾ ಭೋಮ್ಮನಳ್ಳಿ, ಲಕ್ಷ್ಮಿ ಸೊನ್ನದ, ಪ್ರಜಾತಾ ಜಮಾದಾರ, ರೇಣುಕಾ ವಗ್ಗಿ, ಲಕ್ಷ್ಮಿ ನಾಟಿಕಾರ, ಸರೋಜನಿ ವಾಲಿಕಾರ, ಸವಿತಾ ಕೋಳಿ, ಭಾಗೀರಥಿ ವಿಭೂತಿಹಳ್ಳಿ, ಜಯಶ್ರೀ ಹುನಳ್ಳಿ, ಮಾಯಾ ಸಾತಿಹಾಳ, ನಯನಾ ತಿಳಗುಳ, ನಿಂಗಮ್ಮ ದಿಕ್ಸಂಗಿ, ಅನುರಾಧ ಕೋಳಿ, ಗಂಗೂಭಾಯಿ ವಾಲಿಕಾರ ಜಯಮಾಲಾ ಸುಣಗಾರ ಪಾರ್ವತಿ ಕೋಳಿ ಜ್ಯೋತಿ ಬಸರಕೋಡ ಇನ್ನಿತರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.