ಹೆಣ್ಣಿಗೆ ಭಾರತದಲ್ಲಿ ಪೂಜ್ಯನೀಯ ಸ್ಥಾನವಿದೆ..!
ಇಂಡಿ: ಮಾನವ ಕುಲವನ್ನು ಬೆಳೆಸುವ ಹೆಣ ್ಣಗೆ ಭಾರತದಲ್ಲಿ ಪೂಜ್ಯನೀಯ ಸ್ಥಾನವಿದೆ. ಹೆಣ್ಣುಮಕ್ಕಳು ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮತ್ತು ನಿರ್ಭೀತಿಯಿಂದ ಮಾಡಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಗಂಡಿನ ಸರಿಸಮಾನಳಾಗಿದ್ದೇನೆ ಎಂಬುದನ್ನು ಇಂದು ತೋರಿಸಿಕೊಟ್ಟಿದ್ದಾಳೆ ಎಂದು ಶಿಕ್ಷಕಿ ದಾನಮ್ಮ ಹಿರೇಮಠ ಹೇಳಿದರು.
ಅವರು ಶನಿವಾರ ಇಂಡಿ ಪಟ್ಟಣದ ಆಶ್ರಯ ಕಾಲೊನಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳೆ ಇಂದು ಗಂಡಿಗೆ ಸರಿಸಮಾನಳಾಗಿ ನಿಂತಿದ್ದಾಳೆ. ಸಮಾಜದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದಾಳೆ. ಪೋಷಕರಾದವರು ತಮ್ಮ ಹೆಣ್ಣುಮಕ್ಕಳ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು. ಈ ಮೂಲಕ ಅವರಲ್ಲಿ ಪ್ರತೀ ಕ್ಷೇತ್ರದಲ್ಲಿ ಅವಕಾಶ ನೀಡಬೇಕು. ಆಗ ಮಾತ್ರ ವಿಶ್ವ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ಸ್ಥಳೀಯ ಹಿರಿಯ ಜೀವಿ ಗೌರಾಬಾಯಿ, ದಾನಮ್ಮ ಹಿರೇಮಠ, ದೀಪಾಲಯ ಸ್ವಯಂ ಸೇವಾ ಸಂಸ್ಥೆಯ ಸೇವಕಿಯರಾದ ಶಾರದಾ, ಪ್ರೇಮಾ, ಕಲಾವತಿ ಅವರನ್ನು ಸನ್ಮಾನಿಸಲಾಯಿತು. ಗೌರಾಬಾಯಿ ಉದ್ಘಾಟಿಸಿದರು. ಎಸ್.ಎ.ಮೋಮಿನ್ ನಿರೂಪಿಸಿದರು. ಜೆ.ಎ.ಚೌಡಿಹಾಳ ಸ್ವಾಗತಿಸಿದರು. ಎಸ್.ಜಿ.ಕಟ್ಟೀಮನಿ ವಂದಿಸಿದರು.
ಇಂಡಿ: ಪಟ್ಟಣದ ಆಶ್ರಯ ಕಾಲೊನಿಯ ಸಕರ್uಟಿಜeಜಿiಟಿeಜರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಶಿಕ್ಷಕಿ ದಾನಮ್ಮ ಹಿರೇಮಠ, ಗೌರಾಬಾಯಿ ಹೂಗಾರ, ಪಟ್ಟಣದ ಸ್ವಯಂ ಸೇವಾ ಸಂಸ್ಥೆ ದಿಪಾಲಯದ ಸ್ವಯಂ ಸೇವಕರಾದ ಪ್ರೇಮಾ, ಶಾರದಾ, ಅಂಜುA ಜಮಾದಾರ, ಕಲಾವತಿ ಅವರನ್ನು ಸನ್ಮಾನಿಸಲಾಯಿತು.