ಮುದ್ದೇಬಿಹಾಳ:ಬಲಿಷ್ಠ ರಾಷ್ಟ್ರ ನಿರ್ಮಾಣ ಅವಾಗ ಬೇಕಾದರೆ ಲ ಮಹಿಳಾ ಸಬಲೀಕರಣ ಸಂಪೂರ್ಣವಾಗಿ ಸಾಧಿಸಲೇಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಬಸಂತಿ ಜಿ. ಮಠ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಮಾತೃ ಭಾರತಿ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ಸಬಲೀಕರಣವೇ ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಮಹಿಳಾ ಸಬಲೀಕರಣವನ್ನು ಸಾಧಿಸಬೇಕಾದರೆ ಮಹಿಳೆ ಮೊದಲು ಶಿಕ್ಷಣ ಪಡೆದಿರಬೇಕು. ಬಾಲ್ಯ ವಿಹಾಹ, ಹೆಣ್ಣು ಶಿಶು ಬ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇತ್ಯಾದಿ ಅನಿಷ್ಟಗಳಿಂದ ಹೆಣ್ಣು ಮುಕ್ತವಾಗವಾಬೇಕು. ಅಲ್ಲದೆ ಈ ರೀತಿ ಸಾಮಾಜಿಕ ಪಿಡುಗು ಹೆಣ್ಣಿನ ಮೇಲೆ ನಡೆಯುತ್ತಿದ್ದಲ್ಲಿ ಸಂಘಟಿತರಾಗಿ ಮಹಿಳೆಯರು ಮೊದಲು ಖಂಡಿಸಲೇ ಬೇಕಾಗಿದೆ. ಸರಕಾರ ಸದಾ ಮಹಿಳೆಯ ಮಾನ ,ಪ್ರಾಣ, ಸ್ವಾಸ್ಥ್ಯ ಗಳ ರಕ್ಷಣೆಗೆ ಇದ್ದೇ ಇರುತ್ತದೆ. ಧಾರವಾಹಿ, ಚಲನಚಿತ್ರ ಇತ್ಯಾದಿ ದೃಶ್ಯ ಮಾಧ್ಯಮಗಳಲ್ಲಿ ಬರುವ ಸಮಾಜ ಘಾತಕ ವಿಷಯಗಳಿಗೆ ಮನಸ್ಸು ಉದ್ರೇಕಗೊಳ್ಳ ಬಾರದು. ನೈಜ ಜೀವನಕ್ಕೆ ಬೇಕಾದ ಉತ್ತಮ ಅಂಶಗಳ ಚಿಂತನೆ ಮನಸ್ಸಿನಲ್ಲಿ ಇರಬೇಕು. ಮಹಿಳೆಯರಿಗೆ ಸಿಗಬೇಕಾದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.
ಪಿಲೇಕಮ್ಮ ನಗರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯಾದ ಕವಿತಾ ಅರಳದಿನ್ನಿಯವರಿಗೆ ಆದರ್ಶ ಸಮಾಜ ಸೇವಕಿ ಎನ್ನುವ ಪ್ರಶಸ್ತಿಯನ್ನು ಸಂಸ್ಥೆಯ ವತಿಯಿಂದ ಪ್ರದಾನ ಮಾಡಲಾಯಿತು.
ಶಾಲಾ ಮಾತೆಯರು ಹಾಗೂ ಶಿಕ್ಷಕಿಯವರುಸೇರಿ ಸಾಂಸ್ಕೃತಿಕ ಕಲರವ ನಡೆಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷರಾದ ಬಿ.ಪಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತೃಭಾರತಿ ಪರಿಷತ್ತಿನ ಅಧ್ಯಕ್ಷರಾದ ಶ್ರೀದೇವಿ ಪತ್ತಾರ, ಸಂಸ್ಥೆಯ ನಿರ್ದೇಶಕರುಗಳಾದ ಮೀನಾಕ್ಷಿ ಕುಲಕರ್ಣಿ, ಬಸವರಾಜ ನಾಲತವಾಡ, ಜಿ.ಜೆ.ಪಾದಗಟ್ಟಿ, ಮಾತೃ ಭಾರತಿ ಪರಿಷತ್ತಿನ ಪದಾಧಿಕಾರಿಗಳಾದ ಅಕ್ಕಮಾದೇವಿ ಪೂಲೇಶಿ, ರಶ್ಮಿ ತೇಲಂಗಿ, ಬಸಮ್ಮಾ ಕೆಂದೂಳಿ, ಶಾರದಾ ಗಸ್ತಿಗಾರ, ಕಾಲೇಜಿನ ಪ್ರಾಚಾರ್ಯ ಅರುಣ ಹುನಗುಂದ, ಪ್ರೌಢ ಶಾಲಾ ಪ್ರಧಾನಾಚಾರ್ಯ ರಾಮಚಂದ್ರ ಹೆಗಡೆ ಸೇರಿದಂತೆ ಇತರರು ಹಾಜರಿದ್ದರು.
ಆಂಗ್ಯ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಗುರುಮಾತೆ ಸರಸ್ವತಿ ಮಡಿವಾಳರ್ ನಿರೂಪಿಸಿದರು. ಶಿಕ್ಷಕಿ ಅನ್ನಪೂರ್ಣ ನಾಗರಾಳ ವಂದಿಸಿದರು.