ಭೀಮಾನದಿಗೆ ಹಾರಿ ಮಹಿಳೆ ಆತ್ಮಹತ್ಯೆ..!
ಚಡಚಣ : ಭೀಮಾನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಹತ್ತೀರ ನಡೆದಿದೆ.
ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಭೀಮಾನದಿ ಬ್ಯಾರೇಜ್ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ದುರ್ದೈವಿ ಇಂಡಿ ಪಟ್ಟಣದ ಬೀರಪ್ಪ ನಗರ ನಿವಾಸಿ ಸುಶೀಲಬಾಯಿ ಶಾಂತಪ್ಪ ಬಿರಾದಾರ ವಯಸ್ಸು ೬೨ ಎಂದು ತಿಳಿದು ಬಂದಿದೆ. ಮೃತ ಮಹಿಳೆಯು ಸೋಲಾಪುರ ಜಿಲ್ಲೆಯ ಗಡಿ ಗ್ರಾಮ ಟಾಕಳಿಯಲ್ಲಿ ವಾಸ ಮಾಡುತ್ತಿದ್ದಳು. ಈ ಕುರಿತು ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಮಂದ್ರೂಪ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















