ಸಿರಗುಪ್ಪ: ತಾಲ್ಲೂಕಿನ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಾಪುರ ಗ್ರಾಮದ ಹೊರವಲಯದಲ್ಲಿರುವ ಕುರಿಗಾಹಿಗಳ ಕುರಿ ಹಟ್ಟಿಯ ಮೇಲೆ ತೋಳಗಳು ದಾಳಿಗೆ 25 ಕುರಿಗಳು ಅಸುನೀಗಿವೆ. ಕುರಿ ಹಟ್ಟಿಯ ಮೇಲೆ 3 ಅಡವಿ ತೋಳಗಳು ದಾಳಿ ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತೋಳಗಳು ದಾಳಿ ನಡೆಸಿ ಕುರಿಗಳ ಬಲಿ ಪಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಓಡಿಸುವ ಪ್ರಯತ್ನ ಮಾಡಿದಾಗ ತೋಳಗಳು ಪರಾರಿಯಾಗಿವೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿಯ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕರ ಪುತ್ರ ಎಂ ಎಸ್ ಸಿದ್ದಪ್ಪ ನಾಯಕ ವೀಕ್ಷಣೆ ಮಾಡಿ ನಂತರ ತಹಶೀಲ್ದಾರ ಎನ್, ಆರ್, ಮಂಜುನಾಥ ಸ್ವಾಮಿ, ಪಶುವೈದ್ಯಾಧಿಕಾರಿ ವೈ ಗಂಗಾಧರ, ಅರಣ್ಯ ಅಧಿಕಾರಿ ಗಿರೀಶ್ ರವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಕುರಿಗಳನ್ನು ಕಳೆದು ಕೊಂಡಿರುವ ಕುರಿಗಾಹಿಗಳಿಗೆ ಸರ್ಕಾರದಿಂದ ಶೀಘ್ರವಾಗಿ ಪರಿಹಾರ ಕೊಡಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.