ಹೊಸ ವರ್ಷದಿಂದ ಹೊಸ ಸಂಕಲ್ಪ ಮಾಡೋಣ : ಕೆ.ಜೆ. ಶ್ರೀಧರ ನಾಯಕ
ಮೈಸೂರು : ಹೊಸ ವರ್ಷವೆಂದರೆ ಕೆಟ್ಟದ್ದನ್ನು ಮರೆತು, ಒಳ್ಳೆಯದನ್ನು ಸ್ವೀಕರಿಸಿ ಗಟ್ಟಿಯಾದ ನಿರ್ಧಾರದೊಂದಿಗೆ, ಹೊಸ ವಿಚಾರಗಳೊಂದಿಗೆ, ಹೊಸ ಸಂಕಲ್ಪ ಮಾಡುವ ದಿನ ಎಂದು ಕೆಜೆ ಶ್ರೀಧರ ನಾಯಕ ಅಭಿಪ್ರಾಯಪಟ್ಟರು.
ಇದು ಕೇವಲ 2023ಕ್ಕೆ ವಿದಾಯ ಹೇಳಿ 2024ಕ್ಕೆ ಸ್ವಾಗತ ಹೇಳುವ ದಿನವಲ್ಲ..! ಹೊಸ ವರ್ಷ ಎಂದರೆ ಖಂಡಿತಾ ಮನಸ್ಸಿನಲ್ಲೊಂದು ಆನಂದ ಮೂಡುತ್ತದೆ. ಇದು ಬರೀ ಕ್ಯಾಲೆಂಡರ್ ಬದಲಾಯಿಸುವ ದಿನ, ಕ್ಷಣ ಅಲ್ಲ. ಹೊಸ ಶಕ್ತಿ, ಹುರುಪು, ಹೊಸ ದೃಷ್ಟಿಕೋನದೊಂದಿಗೆ ಮತ್ತೊಂದು ವರ್ಷವನ್ನು ಆಚರಿಸುವ ಸಡಗರವೂ ಹೌದು. ಇದೇ ಕಾರಣಕ್ಕೆ ಹೊಸ ವರ್ಷ ಎಂದರೆ ವಿಶ್ವದೆಲ್ಲದೆಡೆ ಸಂತಸ ಮನೆ ಮಾಡಿರುತ್ತದೆ.
ಹೊಸ ವರ್ಷದ ಹೊಸ ಹುರುಪು ಆ ಕ್ಷಣದಿಂದಲೇ ಶುರುವಾಗುತ್ತದೆ. ಅಲ್ಲಿಂದ ನಮ್ಮ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಹಾಳೆ ತೆರೆಯುತ್ತದೆ. ಹೀಗೆ ನಮ್ಮಲ್ಲೊಂದು ಚೈತನ್ಯ, ಆನಂದ ಮೂಡಿಸುವ ಈ ಸುಂದರ ಕ್ಷಣದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವ ದಿನ ಎಂದು ಹೇಳಿದರು.
ಅದಲ್ಲದೇ ಮನಸ್ಸಲ್ಲಿ ಕಟ್ಟಿಕೊಂಡಿರುವ ಕನಸ್ಸುಗಳನ್ನು, ಸಕಾರಗೊಳ್ಳಲು, ಸಕಾರಾತ್ಮಕವಾಗಿ ಸ್ಪಂದಿಸುವ ಹೃದಯ ಸಂಕಲ್ಪದೊಂದಿಗೆ ಮುನ್ನುಗ್ಗಲು ಇಂದಿನ ಹೊಸ ಕ್ಷಣದಲ್ಲಿ ಪಣತೊಡಬೇಕು ಎಂದು ಹೇಳಿದರು.