ಇಂಡಿ : ಮದ್ಯಪಾನ ಚಟದಿಂದಾಗಿ ಬಡ ಮದ್ಯಮ ಕುಟುಂಬಗಳ ಜೀವನ ಹಾಳುಗುತ್ತಿರುವುದು ಸರಕಾರದ ಗಮನಕ್ಕೆ ಬಂದದಿಯೇ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸುವರ್ಣ ಸೌಧದಲ್ಲಿ ಚುಕ್ಕೆ ಗುರುತಿಲ್ಲದೆ ಪ್ರಶ್ನೆಯ ಮೂಲಕ ಧ್ವನಿ ಮೊಳಗಿಸಿದರು. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮದ್ಯ ನಿಷೇಧ ಬಗ್ಗೆ ಬೇಡಿಕೆ ಮಾಡುತ್ತಿರುವುದು. ಹಾಗೆ ಬೇರೆಬೇರೆ ರಾಜ್ಯದಲ್ಲಿ ಮದ್ಯ ನಿಷೇಧಂತೆ ರಾಜ್ಯದಲ್ಲಿಯೂ ಮದ್ಯ ನಿಷೇಧ ಮಾಡುವ ಆಸಕ್ತಿ ಸರಕಾರಕ್ಕೆ ಇದೆಯೇ ? ಇದರ ಬಗ್ಗೆ ಸರಕಾರದ ಸ್ವಷ್ಟ ನೀಲುವೇನು ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ, ಸರಕಾರ ವತಿಯಿಂದ ಸ್ಥಾಪಿತವಾಗಿರುವ ಮದ್ಯದ ಅಂಗಡಿಗಳಿಂದ ಗುಣಮಟ್ಟಮದ್ಯ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಮದ್ಯ ಬಯಸುವ ಪಾನೀಕರಿಗೆ ಉತ್ತಮ ಗುಣಮಟ್ಟದ ಮದ್ಯ ದೊರೆಯುವಂತಾಗಿದೆ. ಇನ್ನೂ ಮದ್ಯಪಾನದಿಂದ ಬಡ ಮದ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸುಧಾರಿಸಲು ಮದ್ಯಪಾನ ಸಂಯಮ ಮಂಡಳಿಯ ವತಿಯಿಂದ ಮದ್ಯಪಾನದಿಂದಾಗುವ ಅನಾಹುತಗಳ ಬಗ್ಗೆ ಕಮ್ಮಟಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮದ್ಯಪಾನ ನಿಷೇಧ ಮಾಡುವುದರಿಂದ ಪಾನಿಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಕಳ್ಳಭಟ್ಟಿ, ಕಲಬೆರಕೆ ಮದ್ಯ, ಪ್ರೆಂಚ್ ಪಾಲೀಸ್ ಹಾಗೂ ಇತರೆ ಮಾದಕ ಪದಾರ್ಥಗಳು ಸೇವಿಸಲು ಆರಂಭಸಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮದ್ಯ ತಯಾರಿಕೆಯ ಅಕ್ರಮ ಚಟುವಟಿಕೆಗಳು ಹೆಚ್ಚುತ್ತವೆ. ಅಕ್ರಮ ಮದ್ಯ ಚಟುವಟಿಕೆ ಜನಜೀವನಕ್ಕೆ ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಅದಲ್ಲದೇ ಮದ್ಯ ನಿಷೇಧ ಬಗ್ಗೆ ಗಮನಹರಿಸಿದ್ರೆ ಮದ್ಯ ಉತ್ಪಾದನೆ ಮತ್ತು ಮಾರಾಟದ ಉದ್ಯಮವನ್ನು ಅವಲಂಬಿಸಿ ಬಹಳಷ್ಟು ಕುಟುಂಬಗಳು ಜೀವನ ನಡೆಸುತ್ತಿದ್ದು ಅವರುಗಳಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತೆದೆ. ರಾಜ್ಯದಲ್ಲಿ ಮದ್ಯ ಮಾರಾಟದಿಂದ ಬರುವ ಆದಾಯವು ೨ನೇ ಅತೀ ದೊಡ್ಡ ರಾಜಸ್ವ ಸಂಗ್ರಹಣೆಯಾಗಿದ್ದು ರಾಜ್ಯದ ಅಭಿವೃದ್ಧಿ ಯೋಜನೆ ಜಾರಿಗೆಗೊಳಿಸಲು ವಿನಿಯೋಗಿಸಲಾಗುತ್ತೆದೆ. ಮದ್ಯಪಾನ ನಿಷೇಧಸುವದರಿಂದ ರಾಜ್ಯದ ಬೊಕ್ಕಸಕ್ಕೆ ನೇರವಾಗಿ ಪರಿಣಾಮ ಬೀರುತ್ತದೆ. ಇನ್ನೂ ಬೇರೆ ರಾಜ್ಯದಂತೆ ನಮ್ಮ ರಾಜ್ಯದಲ್ಲಿ ಮದ್ಯ ನಿಷೇಧ ಬಗ್ಗೆ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲವೆಂದು ಹೇಳಿದರು.