ಅoಗನವಾಡಿ ಕೇಂದ್ರದ ಸುತ್ತ ಕುಡುಕರ ಹಾವಳಿ ತಡೆಯುವಂತೆ : ಸ್ಥಳೀಯ ಒತ್ತಾಯ..!
ಹನೂರು : ತಾಲೂಕಿನ ಮಂಗಲ ಗ್ರಾಮದ ಶುದ್ಧ ನೀರಿನ ಘಟಕದ ಸಮೀಪದಲ್ಲಿ ಇರುವ ಅಂಗನವಾಡಿ ಕೇಂದ್ರದ ಸುತ್ತ ಕುಡುಕರ ಹಾವಳಿ ಹೆಚ್ಚಾಗಿದ್ದು ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿ ಹಾಗು ಸಹಾಯಕಿ ಮತ್ತು ಚಿಕ್ಕ ಮಕ್ಕಳಿಗೆ ಇದರಿಂದ ಕಿರಿಕಿರಿ ಹುಂಟಾಗಿದೆ ಹಾಗು ಸೌಚಾಲಯಕ್ಕೆ ತೆರಳುವ ಜಾಗದಲ್ಲಿ ಮದ್ಯದ ಬಾಟಲಿ ಮತ್ತು ಡಬ್ಬಗಳನ್ನು ಬಿಸಾಡುತ್ತಿದ್ದಾರೆ ಸುತ್ತಮುತ್ತಲಿನ ನಾಲ್ಕೈದು ಪೆಟ್ಟಿ ಅಂಗಡಿಗಳಲ್ಲಿ ಮುಂಜಾನೆಯೇ ಅಕ್ರಮ ಮಧ್ಯ ಮಾರಾಟವಾಗುತ್ತಿದ್ದೂ ಇದರಿಂದ ಕುಡುಕರ ಹಾವಳಿ ಹೆಚ್ಚಾಗಿ ತೊಂದರೆ ಆಗುತ್ತಿದೆ ಅಬಕಾರಿ ಇಲಾಖೆ ಇಂತಹ ಅಕ್ರಮ ಮಧ್ಯ ಮಾರಾಟ ಮಾಡುವವರನ್ನು ತಡೆಗಟ್ಟಬೇಕು ಹಾಗು ಈ ವಿಚಾರವಾಗಿ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಇಲಾಖೆ ಅಧಿಕಾರಿಗಳು ಹಾಗು ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಿ ಅಂಗನವಾಡಿ ಕೇಂದ್ರದ ಸುತ್ತ ಕುಡುಕರ ಹಾವಳಿ ತಪ್ಪಿಸಬೇಕೆಂದು ಗ್ರಾಮದ ಕೆಲ ಪ್ರಜ್ಞಾವಂತ ಯುವಕರು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..