ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಚಾವತಿ – ಯಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜನ್ಮ ದಿನದ ಪ್ರಯುಕ್ತವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಕೊವಿಡ್ -೧೯ ರ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸಾಮಾಜಿಕ ಸೇವೆ ಸಲ್ಲಿಸಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಎ.ಎನ್.ಎಮ್ ಆಸ್ಪತ್ರೆಯ ಸಿಬ್ಬಂದಿವರ್ಗದವರಿಗೆ ತಾಲೂಕಿನ ಹಿರೇರೂಗಿ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ಸೇವಾ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಕರೋನಾ ಸಂದರ್ಭದಲ್ಲಿ ನಮ್ಮ ದೇಶದ ಜನರಿಗೆ ಲಸಿಕೆಯನ್ನು ಕೊಡುವುದು, ಉಚಿತವಾಗಿ ಕೇಂದ್ರ ಸರ್ಕಾರದಿಂದ ಪಡಿತರ ವಿತರಣೆ ಮಾಡುವುದು ಜೊತೆಗೆ ಜನರ ರಕ್ಷಣೆಗಾಗಿ ಆರೋಗ್ಯ ಸೇವೆಯ ಮುಖಾಂತರ ಸರ್ವ ಜನರಿಗೆ ರಕ್ಷಣೆಯನ್ನು ನೀಡಿ ಕರೂನಾ ಮುಕ್ತ ದೇಶವನ್ನಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಮೊಟ್ಟಮೊದಲು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು. ಅದರಂತೆ ಕರೋನಾ ಮುಕ್ತ ಮಾಡಲು ತಮ್ಮ ಜೀವದ ಹಂಗು ತೊರೆದು, ತಮ್ಮ ಕುಟುಂಬವು ಲೆಕ್ಕಿಸದೆ ನಾಡಿನ ಜನರ ರಕ್ಷಣೆಗಾಗಿ ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಹಾಯಕಿಯರು ಹೀಗೆ ಅನೇಕ ಸೇವಾ ಆಕಾಂಕ್ಷಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿ ದೇಶದ ಜನರ ಜೀವವನ್ನು ಕಾಪಾಡಿದ ಅವರೆಲ್ಲರಿಗೂ ನಮ್ಮ ಪಕ್ಷದ ವತಿಯಿಂದ ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯಲಕ್ಷ್ಮಿ ರೋಗಿಮಠ, ಸ್ವಹಿತವನ್ನು ಬಯಸದೆ ಸರ್ವರ ಹಿತವನ್ನು ಬಯಸುತ್ತಿರುವ, ದೇಶವನ್ನು ಜಗತ್ತಿಗೆ ಜಗದ್ಗುರು ಮಾಡಲು ಪ್ರತಿದಿನ 18 ಘಂಟೆ ದೇಶಕ್ಕಾಗಿ ಸೇವೆ ಮಾಡುತ್ತಿರುವ ಮೋದಿಜಿ ಅವರಿಗೆ ಅಭಿನಂದನೆ ಹೇಳಿದರು.
ಭಾರತೀಯ ಜನತಾ ಪಾರ್ಟಿ ಮುಖಂಡ ಸಿದ್ದಲಿಂಗ ಹಂಜಗಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಶೀಲವಂತ ಉಮರಾಣಿ, ಅನಿಲ್ ಜಮಾದಾರ್, ರಾಜಕುಮಾರ್ ಸಗಾಯಿ, ರಾಜಕುಮಾರ್ ಡಂಗಿ ಮಾತನಾಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಬಸಮ್ಮ ಮರಡಿ ಸ್ವಾಗತಿಸಿದರು. ಜಟ್ಟಿಂಗರಾಯ ಮರಡಿ, ರಾಜಶೇಖರ್ ಯರಗಲ್ಲ, ಶಿವಯೋಗಿ ರೂಗಿಮಠ, ಮಹಿಳಾ ಮೋರ್ಚಾ ಪದಾಧಿಕಾರಿ ಶ್ರೀದೇವಿ ಕುಲಕರ್ಣಿ, ಶಶಿಕಲಾ ಪಟೇಲ್, ಮಾಲಾಶ್ರೀ ಮಾದರ್, ಸುರೇಶ್ ಕರಂಡೆ, ವಿಠ್ಠಲ್ ದನಗರ್, ಪರಶುರಾಮ್ ಹೊಸಮನಿ, ವಿಠ್ಠಲ ಹಳ್ಳಿ, ಕಲ್ಲಪ್ಪ ಹೋರ್ತಿ, ಮಲ್ಲು ಉಪ್ಪಾರ್ ಭಾಗಿಯಾಗಿದ್ದರು.