ನಮ್ಮ ಸುತ್ತಲೇ ಸ್ವರ್ಗವಿದೆ – ಶಿವಕುಮಾರ
ಶ್ರೀಗಳು
ಇಂಡಿ : ಜಗತ್ತು ನಮ್ಮ ನೆಮ್ಮದಿಯ ನೆಲೆ. ಇಲ್ಲಿ ಸೊಗಸಾದ ಬದುಕನ್ನು ಕಟ್ಟಿಕೊಳ್ಳಬೇಕು.ಶಾಂತಿ
ಸಮಾಧಾನ ಅನುಭವಿಸಬೇಕು. ನೆಲ,ಜಲ,ಗಾಳಿ,ಬೆಳಕು ನಮಗೆ ಅವಶ್ಯ. ಹೀಗಾಗಿ ನಾವು ಭವ್ಯವೂ ದಿವ್ಯವೂ ಆದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬೀದರಿನ ಚಿದಂಗರ ಆಶ್ರಮದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಶ್ರೀ
ಮಲ್ಲಿಕಾರ್ಜುನ ದೇವರಛಟ್ಟಿ ಜಾತ್ರಾ ಮಹೋತ್ಸವ
ಹಾಗೂ ಶ್ರೀ ಭ್ರಮರಾಂಭಿಕಾ ದೇವಸ್ಥಾನದ
ಜಿರ್ಣೋದ್ಧಾರಗೋಸ್ಕರ ನಡೆದ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.
ದಾಸ್ಯವು ದಾಶ್ಯದ ಮೂಲಕ ವ್ಯಕ್ತಪಡಿಸುವ
ದೇವರ ಮೇಲಿನ ಪ್ರೀತಿ ಮತ್ತು ಭಕ್ತಿ. ದೇವರನ್ನು ಅಥವಾ ಗುರುಗಳನ್ನು ಸಮರ್ಪಣಾಭಾವದಿಂದ ಸೇವೆ ಮಾಡುವದು ದೇವಸ್ಥಾನವನ್ನು ಶುಚಿಗೊಳಿಸುವದು, ಬಡವರ ಸೇವೆ ಮಾಡುವದು,ಧರ್ಮಗ್ರಂಥಗಳನ್ನು
ದ್ಯಾನಿಸುವದು ಅಥವಾ ದೇವರ ಸೇವಕರಾಗಿ ಕೆಲಸ
ಮಾಡುವ ಭಕ್ತಿಯ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.
ಇದೇ ವೇಳೆ ಶಿವಕುಮಾರ ಶ್ರೀಗಳನ್ನು ತುಲಾಭಾರ ಮಾಡಿ ಸನ್ಮಾನಿಸಲಾಯಿತು. ಪ್ರವಚನಕಾರರಾದ ಕಲಬುರಗಿಯ
ಸಿದ್ದಾರೂಢಮಠದ ಮಾತೋಶ್ರೀ ವಿದ್ಯಾತಾಯಿಯವರನ್ನು ಸನ್ಮಾನಿಸಲಾಯಿತು.
ಆಳೂರ ಗ್ರಾಮದ ಸಿದ್ದಾರೂಢ ಮಠದ ಶಂಕರಾನಂದ ಶ್ರೀಗಳು ಮತ್ತು ಮಾತೋಶ್ರೀ ಲಕ್ಷ್ಮೀತಾಯಿಯವರು, ಪ್ರವಚನಕಾರರಾದ ವಿದ್ಯಾತಾಯಿ,ವಿಜಯಕುಮಾರ ಬಿರಾದಾರ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿ.ಎಸ್.ಪಾಟೀಲ, ಡಾ|| ರಮೇಶ
ಬಿರಾದಾರ, ದೇವಸ್ಥಾನದ ಅಧ್ಯಕ್ಷ ನಾಗಪ್ಪಗೌಡ
ಬಿರಾದಾರ, ಕಾರ್ಯದರ್ಶಿ ಸಂಗಪ್ಪ ಉಪ್ಪಿನ, ಇಂಡಿ
ತಾಲೂಕಾ ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಅಣ್ಣಾರಾಯ ಬಮನಳ್ಳಿ,ಗ್ರಾ.ಪಂ ಸದಸ್ಯ ರವಿ
ನಾರಾಯಣಕರ,ನಾಟಕಕಾರರಾದ ಶಿವಾನಂದ ಡೆಂಗಿ,
ಕೆ.ಜಿ.ನಾಟಿಕಾರ, ಸಿದರಾಯ ಅಪ್ತಾಗಿರಿ ಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ
ನಡೆದ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಡಾ.
ಶಿವಕುಮಾರ ಶ್ರೀಗಳು ಮಾತನಾಡಿದರು.