ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ
ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕ್ಯಾತನಡೋಣಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ
ಮುದ್ದೇಬಿಹಾಳ: “ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಕ್ಯಾತನಡೋಣಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಿ ಕೊಟ್ಟಿದ್ದೇನೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಶೀಘ್ರದಲ್ಲೇ ಬಡವರಿಗಾಗಿ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ನೀಡುವ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗುವುದು,” ಎಂದು ಕೆಎಸ್ಡಿಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ತಾಲೂಕಿನ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕ್ಯಾತನಡೋಣಿ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ:
ಗ್ರಾಮಸ್ಥರು ರಸ್ತೆ ದುರಸ್ತಿಗೆ ಮನವಿ ಮಾಡಿದ ತಕ್ಷಣ ಸ್ಪಂದಿಸಿದ ಶಾಸಕರು, ಸ್ಥಳದಲ್ಲೇ ಇದ್ದ ಜಿಲ್ಲಾ ಪಂಚಾಯತ್ ಇಂಜಿನಿಯರ್ಗೆ ರಸ್ತೆ ಅಂದಾಜು ಪಟ್ಟಿ (Estimate) ಸಿದ್ಧಪಡಿಸಲು ಸೂಚಿಸಿದರು. “ದಿಂಡವಾರ-ನಾಲತವಾಡ ಮುಖ್ಯ ರಸ್ತೆಯು ಎರಡು ಪಟ್ಟು ಅಗಲೀಕರಣಗೊಳ್ಳಲಿದ್ದು, ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ,” ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳ ಯಶಸ್ಸು:
ರಂಗೋಲಿ ಅಭಿಯಾನ: ಗ್ಯಾರಂಟಿ ಯೋಜನೆಗಳಿಂದ ತೃಪ್ತರಾದವರು ತಮ್ಮ ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ಬೆಂಬಲ ಸೂಚಿಸಬೇಕು. ಈ ಯೋಜನೆಗಳು ಬಡವರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.
ಯುವನಿಧಿ: ನಾಲ್ಕು ದಿನಗಳ ಒಳಗಾಗಿ ಮನೆ ಮನೆಗೆ ಭೇಟಿ ನೀಡಿ ಯುವನಿಧಿ ತಲುಪದವರ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚನೆ:
ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಜಾಗದ ಲಭ್ಯತೆ ನೋಡಿಕೊಂಡು ಕೂಡಲೇ ಕಾಮಗಾರಿ ಆರಂಭಿಸುವಂತೆ ಇಂಜಿನಿಯರ್ಗಳಿಗೆ ಸೂಚಿಸಿದರು. ಅಲ್ಲದೆ, ಬೂದಿಹಾಳ ಪಿಯುಸಿ ಕುಡಿಯುವ ನೀರಿನ ‘ಜಲಧಾರೆ’ ಯೋಜನೆ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, “ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ ಎಂದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಉಪಾಧ್ಯಕ್ಷ ಲಕ್ಷ್ಮಣ ಚವ್ಹಾಣ, ಸದಸ್ಯರಾದ ಸಂಗು ಚಲವಾದಿ,ಸ್ವರಸ್ವತಿ ಪೀರಾಪೂರ,ಸುಜಾತಾ ಸಿಂದೆ,
ಹಣಮಂತ ಕುರಿ, ಬಸವರಾಜ ಚೀನಿವಾರ, ರಾಮಣ್ಣ ರಾಜನಾಳ,ಬಿಇಒ ಬಿ ಎಸ್ ಸಾವಳಗಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ ಎಂ ಬೆಲಗಲ್ಲ, ತಾಪಂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ,ಆರ್ ಎಸ್ ಹಿರೇಗೌಡರ, ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ,ಶಿವಾನಂದ ಮೇಟಿ,ಡಾ ಎಸ್ ಬಿ ತಿವಾರಿ,ಎಸ್ ಡಿ ಬಾವಿಕಟ್ಟಿ,ಕೆ ಬಿಜೆಎನ್ ಎಲ್ ಆಲಮಟ್ಟಿ ಅಧಿಕಾರಿ ಎ ಯು ಬಾಗವಾನ, ಬಿ ಎಂ ಸಾತಿಹಾಳ,ಎಸಿಡಿಪಿಒ ಶರಣಮ್ಮ ದೇಸಾಯಿ, ಅಂಗನವಾಡಿ ಮೇಲ್ವಿಚಾರಕಿ ಶಾರದಾ ಪೂಜಾರಿ,ಪಿಡಿಓ ನಿರ್ಮಲಾ ತೋಟದ, ಕಾರ್ಯದರ್ಶಿ ಬಸನಗೌಡ ಬಿರಾದಾರ, ನಾಲತವಾಡ ಶಾಖಾ ಹೆಸ್ಕಾಂ ಅಧಿಕಾರಿ ಪಿ ಡಿ ಗುರಡ್ಡಿ, ಕಂದಾಯ ನಿರೀಕ್ಷೆ ವೆಂಕಟೇಶ್ ಅಂಬಿಗೇರ, ಗ್ರಾಮಡಳಿತಾಧಿಕಾರಿ ಶಿವಶರಣ ಕುಂಬಾರ,ಗ್ರಾಪಂ ಸಿಬ್ಬಂದಿಗಳು, ಗ್ರಾಮದ ಮಾಜಿ ಗ್ರಾಪಂ ಸದಸ್ಯ ಹಣಮಂತ್ರಾಯ ಪಾಟೀಲ, ವಿರೇಶ ಚಲವಾದಿ,
ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು,
ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಟ್
ನಮ್ಮ ಕಾಂಗ್ರೆಸ್ ಸರ್ಕಾರ ಜನಪರವಾಗಿದ್ದು, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳು ಪ್ರತಿಯೊಬ್ಬರಿಗೂ ತಲುಪಿವೆ. ಆರೋಗ್ಯ ಭಾಗ್ಯದ ಮೂಲಕ ಬಡವರ ವೈದ್ಯಕೀಯ ವೆಚ್ಚದ ಹೊರೆಯನ್ನು ಸರ್ಕಾರವೇ ಭರಿಸಲಿದೆ.”
— ಸಿ.ಎಸ್. ನಾಡಗೌಡ,ಕೆಎಸ್ ಡಿ ನಿಗಮದ ಅಧ್ಯಕ್ಷರು, ಶಾಸಕರು



















