ಕನ್ನಡ ಮಾಧ್ಯಮದಲ್ಲಿ ಕಲಿತವರು ಯಶಸ್ವಿ ಜೀವನ ಮಾಡುತ್ತಾರೆ ಪ್ರತಿಯೊಬ್ಬರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಕನ್ನಡವನ್ನು ಶ್ರೀಮಂತಗೂಳಿಸಬೇಕು ಬಡಗೂಳಿಸಬಾರದು
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಖಂಡ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಇಬ್ಬಾಗ ಮಾಡುವ ಮಾತುಗಳು ಕೇಳಿ ಬರುತ್ತಿವೆ ಇದನ್ನು ಖಂಡಿಸ್ತವೆ ಅಖಂಡ ಕರ್ನಾಟಕ ಒಂದಾಗಬೇಕು.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ; ಕನ್ನಡ ಮಾಧ್ಯಮದಲ್ಲಿ ಕಲಿತವರು ಯಶಸ್ವಿ ಜೀವನ ಮಾಡುತ್ತಾರೆ ಪ್ರತಿಯೊಬ್ಬರು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಕನ್ನಡವನ್ನು ಶ್ರೀಮಂತಗೂಳಿಸಬೇಕು ಬಡಗೂಳಿಸಬಾರದು ಎಂದು ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ಅವರು ಶನಿವಾರ ತಾಲೂಕ ಆಡಳಿತದಿಂದ ಹಮ್ಮಿಕೊಂಡ ೭೦ ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಖಂಡ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಇಬ್ಬಾಗ ಮಾಡುವ ಮಾತುಗಳು ಕೇಳಿ ಬರುತ್ತಿವೆ ಇದನ್ನು ಖಂಡಿಸ್ತವೆ ಅಖಂಡ ಕರ್ನಾಟಕ ಒಂದಾಗಬೇಕು ಎಂದರು.
ನಾವು ಬೇರೆ ಅವರು ಬೇರೆ ಎನ್ನುವುದರಿಂದ ವಲಸಿಗರ ಸಂಖ್ಯೆ ಜೊತೆಗೆ ಒಡಕು ಉಂಟಾಗುತ್ತಿದೆ ಅಧಿಕಾರದ ಚುಕ್ಕಾಣಿ ವಲಸಿಗರ ಕೈ ಸಿಕ್ಕಿದೆ.
ನೀರಾವರಿ ಸಮೃದ್ದಿ ಮಾಡಬೇಕು ಅಂದಾಗ ನಮ್ಮನ್ನು ಬೆಂಬಲಿಸುವ ರಾಜ್ಯಗಳು ಇಲ್ಲ, ಕೇಂದ್ರದಲ್ಲಿ ಕಡಿಮೆ ಸಿಟ್ 28 ಇವೆ, ಬೇರೆ ರಾಜ್ಯದಲ್ಲಿ 40/50 ಇವೆ ಹೀಗಾಗಿ ಕೇಂದ್ರ ಅವಕ್ಕೆ ಒತ್ತು ನೀಡ್ತಾರೆ, ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ನೋಟಿಪಿಕೇಶನ್ ಆಗಿಲ್ಲ. ಪಕ್ಷಾತೀತವಾಗಿ ಒಂದಾಗಿ ಧ್ವನಿ ಎತ್ತಬೇಕು.ಕೇಂದ್ರ ಸಚಿವರು ರಾಜಿನಾಮೆ ನೀಡ್ತನೆ ಎನ್ನಬೇಕು ಹೇಗೆ ನೋಟಿಪಿಕೇಶನ್ ಆಗುವುದಿಲ್ಲ ನೋಡೋಣ
ಪ್ರಜಾಪ್ರಭುತ್ವದಲ್ಲಿ ಪಕ್ಷಗಳ ಕೈಗೂಂಬೆ ಆಗಿರುವುದು ಪ್ರಜಾಪ್ರಭುತ್ವ ಕಪ್ಪು ಚುಕ್ಕೆಯಾಗಿದೆ
ಲಕ್ಷಾಂತರ ಎಕರೆ ನೀರಾವರಿ ಮಾಡಲು ಶಕ್ಯವಿದೆ ವಿಜಯಪುರ 64% ನೀರಾವರಿ ಆಗುತ್ತದೆ.524 ಎತ್ತರ ಆಗಬೇಕು
ರಾಯಚೂರು ಕಲಬುರಗಿ, ವಿಜಯಪುರ ಬಾಗಲಕೋಟ ನೀರಾವರಿ ಹೆಚ್ಚು ಆಗುತ್ತದೆ, ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ ಕೇಂದ್ರ ಸಂಪುಟದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಿಲ್ಲ ಪ್ರಜಾಪ್ರಭುತ್ವ ದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕನ್ನಡಾಂಬೆಗಾಗಿ ಧ್ವನಿ ಎತ್ತಬೇಕಿದೆ ಎಂದರು.
ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಧ್ವಜಾರೋಹಣ ಮಾಡಿ ಮಾತನಾಡಿದರು ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಎಂ.ಎಂ ಬೆಳಗಲ್ ಕನ್ನಡ ರಾಜ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಗುರು ತಾರನಾಳ, ವೈ ಹೆಚ್ ವಿಜಯಕರ, ಅರವಿಂದ ಹೂಗಾರ, ಸಿಪಿಐ ಮಹಮ್ಮದ್ ಫಸಯುದ್ದೀನ್ ಸೇರಿದಂತೆ ಪುರಸಭೆ ಸದಸ್ಯ ನಾಮನಿರ್ದೇಶಿತ ಸದಸ್ಯರು ಕನ್ನಡಪರ ಹೋರಾಟಗಾರರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಇಒ ಬಿ ಎಸ್ ಸಾವಳಗಿ ಸ್ವಾಗತಿಸಿದರು ಸಂಗಮೇಶ ಶಿವಣಗಿ ತಂಡ ನಾಡಗೀತೆ ಹಾಡಿದರು ಗುಂಡು ಚವ್ಹಾಣ ನಿರೂಪಿಸಿದರು ಸಿದ್ದನಗೌಡ ಬಿಜ್ಜೂರ ವಂದಿಸಿದರು.
ಬಾಕ್ಸ್; ಆಯ್ದ ಶಾಲೆಗಳಿಂದ ವಿದ್ಯಾರ್ಥಿಗಳು ಕನ್ನಡ ಸಾಹಿತಿ ಶರಣರ ಸಾಧಕರ ವೇಷಭೂಷಣದಲ್ಲಿ ಗಮನ ಸಳೆದರು ಕನ್ನಡ ರಾಜ್ಯೋತ್ಸವ ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ತಹಶಿಲ್ದಾರ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಛದ್ಮವೇಷದಾರಿ ಶಾಲಾ ಮಕ್ಕಳ ಮೆರವಣಿಗೆ ಕಿತ್ತೂರ ಚೆನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ತಹಶಿಲ್ದಾರ ಕಚೇರಿಯ ವರಗೆ ಮಾಡಲಾಯಿತು ವಿದ್ಯಾರ್ಥಿಗಳ ವೇಷಭೂಷಣದಲ್ಲಿ ಪ್ರಥಮ ಜೆಸಿ ಚಿನ್ಮಯ ಶಾಲೆಯ ಒಣಕೆ ಓಬವ್ವ ,ದ್ವೀತಿಯ ಹುಲ್ಲೂರ ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಕ್ಕಮಹಾದೇವಿ ,ತೃತೀಯ ಕೆಜಿಎಸ್ ನಂ 2 ಪುರಂದರದಾಸ ವೇಷದಾರಿ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಫಿ ಪ್ರಶಸ್ತಿ ಪತ್ರ ನೀಡಲಾಯಿತು.