ಅಫಜಲಪುರ: ತಾಲೂಕಿನ ಮಲ್ಲಾಬಾದ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಂಚೋಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಮಳೆನೀರು ನಿಂತಿರುವುದರಿಂದ ಗ್ರಾಮದ ಶಾಲೆಗೆ ಹೋಗುವ ಮಕ್ಕಳಿಗೂ ಹಾಗೂ ಜಮೀನುಗಳಿಗೆ ತೆರಳುವ ರೈತರಿಗೂ ತೊಂದರೆಯಾಗುತ್ತಿದ್ದು ಪ್ರತಿವರ್ಷ ಇದೇ ಸಮಸ್ಯೆಗೆ ಜನರು ಕಂಗಾಲಾಗಿದ್ದಾರೆ. ರೈತ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಗ್ರಾಮಸ್ಥರು ಇದನ್ನ ಕೂಡಲೇ ಸರಿಪಡಿಸಿ ಶಾಲಾ ಮಕ್ಕಳಿಗೆ ಮತ್ತು ರೈತರಿಗೆ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಚಿಂಚೋಳಿ ಗ್ರಾಮಸ್ಥರು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಅವರು ಈ ಗ್ರಾಮದಲ್ಲಿ ಪ್ರತಿವರ್ಷ ಇದೆ ಪರಸ್ಥಿತಿ ಇದ್ದು, ಇದನ್ನ ಕುಡಲೆ ಸರಿಪಡಿಸಿ ಒಂದು ವೇಳೆ ಈ ರಸ್ತೆಯನ್ನ ಸರಿಪಡಿಸದೆ ಇದ್ದಲ್ಲಿ ಪಂಚಾಯತಿಗೆ ಬೀಗಹಾಕಿ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ರವರ ಭಾವಚಿತ್ರಕ್ಕೆ ಮೆಟ್ಟಿನ ಹಾರವನ್ನ ಹಾಕಿ ಪಂಚಾಯತಿಯ ಎದರು ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಅಧ್ಯಕ್ಷರಾದ ಮಹಾಂತೇಶ ಜಮಾದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶೈಲ ಗೋಳೆ, ವಿಠ್ಠಲ್ ಹೊಟ್ಕರ್, ಪ್ರೌಢ ಶಾಲೆಯ ಶಿಕ್ಷಕರಾದ ಗೌತಮ್, ಗ್ರಾಮಸ್ಥರಾದ ಶ್ರೀಮಂತ ಗೊಳೆ, ಮುಖಂಡರಾದ ರಮೇಶ್ ಜಗದಿ, ಮಲ್ಲಾಬಾದ್ ಸೊಸೈಟಿ ಬ್ಯಾಂಕಿನ ನಿರ್ದೇಶಕರಾದ ಶಿವು ಮುತ್ಯಾ ಹಿರೇಮಠ, ಸಿದ್ದಪ್ಪ ಯಳಸಂಗಿ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ವರದಿ ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.