ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವಂತೆ ರೈತರ ಧರಣಿ ಸತ್ಯಾಗ್ರಹ,
ಇಂಡಿ : ಗುತ್ತಿ ಬಸವಣ್ಣ ಹೋರಾಟ ಸಮಿತಿ ತಾಂಬಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಅನಿರ್ದಿಷ್ಟಾವಧಿ 50 ಕಿಮೀ ಯಿಂದ 120 ಕಿಮೀ ವರೆಗೆ ಕಾಲುವೆಗೆ ಹರಿಸಬೇಕು ಎಂದು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಗುತ್ತಿ ಬಸವಣ್ಣ ಹೋರಾಟ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರ ಸಹಯೋಗದೊಂದಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮೂಲಕ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಜೊತೆಗೆ ಸಂಬಂಧಪಟ್ಟ ಕೆ.ಬಿ.ಜ.ಎನ್.ಎಲ್ಲ್ ಎಜಕ್ಯುಟೇಡ್ ಇಂಜಿನಿಯರ ಬೇಟಿ ನೀಡಿದ್ದಾಗ ರೈತರು ಕೇಳಿದ ಪ್ರಶ್ನೆಗೆ ತುಟಿ ಬಿಚ್ಚದೆ ಮೌನವಾಗಿ ತೇರಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಮಾತಾನಾಡಿದ ಅವರು, 2006 ರಿಂದ ಹನಿ ನೀರಾವರಿ ಯೋಜನೆ ಆರಂಭವಾಗಿದೆ. ಆದರೆ ಒಂದು ಹನಿ ನೀರೂ ಕೂಡಾ ಜಮೀನುಗಳಿಗೆ ಹರಿದಿಲ್ಲಾ. 2019 ರಿಂದ ಇಲ್ಲಿಯವರೆಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಎಳ್ಳಷ್ಟು ಪ್ರಯೋಜನವಾಗಿಲ್ಲ. ಸತತ ಬರಗಾಲದಿಂದ ತತ್ತರಿಸಿದ್ದೆವೆ. ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳಲ್ಲಿ ಹನಿ ನೀರು ಬರುತ್ತಿಲ್ಲ. ಇನ್ನು ಧೀರ್ಘಕಾಲದ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ ಬೆಳೆಗಳು ಒಣಗಿ ಹೋಗುತ್ತಿವೆ. ಸರ್ಕಾರ ಕೂಡಲೆ ಹೆಚ್ವೆತ್ತು ರೈತರಿಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ಪ್ರತಿಭಟನಾ ರೈತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಯ್ಯ ಸಾರಂಗಮಠ, ರಾಜಶೇಖರ ಗಂಗನಹಳ್ಳಿ, ಎಮ್ ಬಿ ನವದಗಿ, ಗುರುಸಂಗಪ್ಪ ಬಾಗಲಕೋಟ, ಸಿದ್ದಪ್ಪ ಬೂದಿಹಾಳ, ರಾಯಗೊಂಡ ಪೂಜಾರಿ, ವಿಜಯಕುಮಾರ್ ಗೊರನಾಳ, ಬಾಬು ಅವಟಿ, ದುಂಡಪ್ಪ ಮುಂಜಿ, ಸಾಯಬಣ್ಣ ಬನ್ನಿಹಟ್ಟಿ ,ಅರ್ಜುಯ ಮುಂಜಿ ಇನ್ನೂ ಅನೇಕ ರೈತರು ಉಪಸ್ಥಿತರು.