ಭೀಮಾ ನದಿಗೆ ನೀರು ಬಿಡಿ, ಭೀಮಾ ತೀರದ ರೈತರ ಹಿತಕಾಪಾಡಿ
ಅಫಜಲಪುರ: ಬತ್ತಿದ ಭಿಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಗೆ ಹರಿಯಬೇಕಾಗಿದ್ದ ನೀರು ಕಾನೂನಿನ ಪ್ರಕಾರ ನೀರು ಹರಿಸಬೇಕು ಅಲ್ಲಿಯವರೆಗೆ ತಾತ್ಕಾಲಿಕವಾಗಿ ಬಸವಸಾಗರ ಜಲಾಶಯದಿಂದ ಕಾಲುವೆ ಮುಖಾಂತರ ಭೀಮಾ ನದಿಗೆ ನೀರು ಹರಿಸಿ ಕುಡಿಯಲು ನೀರು ಒದಗಿಸಿ ಕೊಡಬೇಕು ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷರಾದ ರಮೇಶ್ ಹೂಗಾರ್ ರವರು ಬರಗಾಲದ ಪರಿಹಾರ ಹಣ ಕೂಡಲೇ ಒಂದು ಎಕರೆಗೆ 25000 ನೀಡಬೇಕು ಹಲವಾರು ರೈತರ ಬೇಡಿಕೆಗಳ ಕುರಿತು ಇಂದು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ಅವರಿಗೆ ಭೇಟಿ ಮಾಡಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಮನವಿ ಪತ್ರ ನಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧರ್ಮರಾಜ್ ಸಾವು ಭಾಗಣ್ಣ ಕುಂಬಾರ್ ರೇವಣಸಿದ್ದಯ್ಯ ಮಲ್ಲು ಎಂ ಸೋಲಾಪುರ್ ಕಂಟೆಪ್ಪ ಹನೂರು ಭಾಗವಹಿಸಿದ್ದರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ.