ಬ್ಯಾಂಕ್ ಖಾತೆಗಳಲ್ಲಿ ದುಡ್ಡಿಟ್ಟಿದ್ದರೆ ಎಗರಿಸ್ತಾರೆ ಹುಷಾರ್ !
ಇಂಡಿ: ನಾಗರಿಕರು ರಾಷ್ಟ್ರೀಯಕೃತ ಬ್ಯಾಂಕ್‌ಗಳ ಮೇಲೆ ವಿಶ್ವಾಸ, ಭದ್ರತೆ ಮತ್ತು ಸುರಕ್ಷತೆಗಾಗಿ ನಂಬಿಕೆ ಇಟ್ಟು ಬ್ಯಾಂಕ್‌ಗಳಲ್ಲಿ ಹಣವನ್ನು ಇಡುತ್ತಾರೆ. ಆದರೆ ಕೆಲ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ಎಗುರಿಸುತ್ತಿದ್ದಾರೆ.
ಪಟ್ಟಣದ ಪಾನ್ ಮಸಾಲಾ ವ್ಯಾಪಾರಿಯೋರ್ವರ ಖಾತೆಯಲ್ಲಿನ ಬರೋಬ್ಬರಿ ೨೧೦೦೦೦ (ಎರಡು ಲಕ್ಷ ಹತ್ತು ಸಾವಿರ) ಹಣವನ್ನು ವಂಚಕರು ಅಕೌಂಟ್‌ನಿಂದ ಕಿತ್ತುಕೊಂಡಿದ್ದಾರೆ. ಸೈಬರ್ ವಂಚಕರು ಸಾಯಿ ಸನ್ನಿಧಿ ಹೆಸರಿನಲ್ಲಿರುವ ಶಿವಾನಂದಯ್ಯ ಲಕ್ಕುಂಡಿಮಠ ಅವರಿಗೆ ಸೇರಿದ ಕೆನರಾ ಬ್ಯಾಂಕ್ (೧೨೫೦೦೪೯೩೯೨೧೯) ಖಾತೆಯಲ್ಲಿ ಒಂದೇ ಸರತಿಗೆ ಹಣ ಕೀಳದೆ, ಒಮ್ಮೆ ಪ್ರಥಮವಾಗಿ ೧ ಲಕ್ಷ, ೨ನೇ ಸಲ ೩೫ ಸಾವಿರ,೩ ನೇ ಸಲ ೫೦ ಸಾವಿರ, ೪ ನೇ ೨೫ ಸಾವಿರ ಹೀಗೆ ನಾಲ್ಕು ಬಾರಿ ಖಾತೆಯಲ್ಲಿನ ಹಣ ಪಡೆದುಕೊಂಡಿದ್ದಾರೆ.
ಬ್ಯಾಂಕ್ ಮೋಬಾಯಿಲ್ ಆಪ್ ಇಲ್ಲ, ಎಟಿಎಂ ಇಲ್ಲ, ಚೆಕ್ ಇಲ್ಲ ಹೀಗಿದ್ದರೂ ಸಹಿತ ಖಾತೆಯಲ್ಲಿನ ಹಣ ಖಾಲಿಯಾಗಿದೆ.
ಭಾನುವಾರ ಮದ್ಯಾಹ್ನ ಸುಮಾರಿಗೆ ಖಾತೆಯಲ್ಲಿ ಒಮ್ಮೆಲೆ ೧ ಲಕ್ಷ ಹಣ ಕಡಿತಗೊಂಡಿದೆ. ತಕ್ಷಣ ಗಾಬರಿಯಾಗಿ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಲಾಗಿದೆ. ಆದರೆ ಇಂದು ಭಾನುವಾರ ಬ್ಯಾಂಕ್ ರಜೆ ಇದೆ. ಏನೂ ಮಾಡಕ್ಕಾಗಲ್ಲ ಎಂದು ಮ್ಯಾನೇಜರ್ ತಿಳಿಸಿದ್ದಾರೆ. ಕರೆ ಕಟ್ಟ ಆಗುವಷ್ಟರಲ್ಲಿ ಮತ್ತೆ ಮೂರು ಬಾರಿ ಹಣ ಕಟ್ ಆಗಿದೆ ಎಂದು ಹಣ ಕಳೆದುಕೊಂಡ ಶಿವಾನಂದಯ್ಯ ಲಕ್ಕುಂಡಿಮಠ ತಿಳಿಸಿದ್ದಾರೆ.
ಭಾನುವಾರ ಸಾಯಂಕಾಲವೇ ವಿಜಯಪೂರದ ಸೈಬರ್ ಕ್ರೆಂ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಗದೆ. ಸೋಮವಾರ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇಂಡಿ: ಶಿವಾನಂದಯ್ಯ ಲಕ್ಕುಂಡಿಮಠ ಭಾವಚಿತ್ರ.
ಇಂಡಿ: ಖಾತೆಯಲ್ಲಿನ ಹಣ ಕಟ್ ಆಗಿರುವ ಬಗ್ಗೆ ಮಾಹಿತಿ.