ಇಂಡಿಯಲ್ಲಿ ಚಿಕನ್ 65, ಗೋಬಿ 65 ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ..! ಏನು ಗೊತ್ತಾ..?
ಇಂಡಿ : ಬಿದಿ ಬದಿಯಲ್ಲಿ ಲಾಲಿ ಪಾಪ್, ಬಾಂಬೆ ಮಿಟಾಯಿ, ಚಿಕನ್ 65, ಗೋಬಿ 65 ಜೊತೆಗೆ ಇತರೆ ಕರೆದ ಪದಾರ್ಥಗಳ ತಯಾರಕರ ಅಂಗಡಿಗಳಿಗೆ ಬೇಟಿ ನೀಡಿ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಪರಿಶೀಲಿಸಿ, ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು ಖಡಕ ಎಚ್ಚರಿಕೆ ಆಹಾರ ಸುರಕ್ಷತಾ ಆರ್ ಎಸ್ ಬಿರಾದಾರ ನೀಡಿದರು.
ಶುಕ್ರವಾರ ಪಟ್ಟಣದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಪುರಸಭೆಯವರ ಜಂಟಿಯಲ್ಲಿ ಆಹಾರ ಗುಣಮಟ್ಟ ಪರಿಶೀಲನೆಯ ಕಾರ್ಯಾಚರಣೆ ನಡೆಯಿತು.
ಅಸುರಕ್ಷಿತ ಹಾಗೂ ಕಲಬೆರಕೆ ಆಹಾರ ಸೇವನೆಯಿಂದ
ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳು ಬೀರುತ್ತಿವೆ. ಹಾಗಾಗಿ ಆಹಾರ ಸೇವನೆ ಮುನ್ನ ಗ್ರಾಹಕರು ಆಹಾರದ ತಯಾರಿಕೆ ಬಗ್ಗೆ ಗಮನಹರಿಸಿ ಆಹಾರ ಸೇವೆನೆ ಮಾಡಬೇಕು. ಗೋಬಿ 65, ಚಿಕನ್ 65 ಮತ್ತು ಲಾಲಿ ಪಾಪ್ ನಂತಹ ಕರೆದ ಪದಾರ್ಥಗಳಲ್ಲಿ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಕಂಡುಬರುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತೀ ಅವಶ್ಯಕ. ಇನ್ನೂ ಪಟ್ಟಣದಲ್ಲಿ ಹಲವು ಅಂಗಡಿಗಳಿಗೆ ಬೇಟಿ ನೀಡಿದಂತೆ ಅತೀ ಹೆಚ್ಚಾಗಿ ಕಂಡುಬಂದಿದ್ದು, ಸ್ವಚ್ಚತೆ ಮತ್ತು ಅಸುರಕ್ಷಿತತೆ. ಆ ಕಾರಣಕ್ಕಾಗಿ ಪುರಸಭೆ ವತಿಯಿಂದ ಬಿಸ್ಮಿಲ್ ಹಾಗೂ ಬಡೆಮಿಯಾ ಹೊಟೆಲ್ ಅವರಿಗೆ , ತಲಾ 5 ಸಾವಿರ ರೂಪಾಯಿ ದಂಡ ಹಾಕಲಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ಸಾರ್ವಜನಿಕರು ಆಹಾರ ಸೇವನೆ ಮುನ್ನ ತಯಾರಕರ ಬಗ್ಗೆ, ಅಲ್ಲಿ ಕಾಣಿಸುವ ವಸ್ತುಗಳ ಮತ್ತು ಪದಾರ್ಥಗಳ ಬಗ್ಗೆ ಪರಿಶೀಲಿಸಿ ಆಹಾರ ಸೇವನೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಆರೋಗ್ಯಕ್ಕೆ ನಾವೇ ಕಾರಣ, ನಾವೇ ಹಾನಿಕಾರಕ ಎಂದು ಆಹಾರ ಪ್ರಾಧಿಕಾರ ಅಧಿಕಾರಿ ಹೇಳಿದರು.
ಇನ್ನೂ ಇದೇ ಸಂದರ್ಭದಲ್ಲಿ ಎಲ್ ಎಸ್ ಸೋಮನಾಯಕ, (ಕಿರಿಯ ಆರೋಗ್ಯ ನೀರಿಕ್ಷಕರು ಅವರು ಮಾತನಾಡಿದ ಅವರು, ಶುಚಿತ್ವ ಕಾಯೋಣ, ಆಹಾರ ಕಲುಷಿತವಾಗದಂತೆ ನೋಡೋಣ, ಕಲಬೆರಕೆ ಇಲ್ಲದ ಆಹಾರ ನೀಡೋಣ’ ಎಂಬ ಮಂತ್ರವನ್ನು ಪ್ರತಿಪಾದಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮ, ನಿಬಂಧನೆಗಳು– 2011ರ ಆಗಸ್ಟ್ 5ರಿಂದ ಜಾರಿಗೆ ಬಂದಿವೆ. ಉತ್ತಮ ಗುಣಮಟ್ಟದ ಆಹಾರ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯ ಆಗಿರುತ್ತದೆ. ಆಹಾರ ತಯಾರಿಸುವ ಪ್ರತಿಯೊಂದು ಘಟಕ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಉತ್ಪನ್ನಗಳನ್ನು ಮಾರಾಟ ಮಾಡುವ ಕಿರಾಣಿ ಅಂಗಡಿಯವರೂ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಬೀದಿಬದಿಯಲ್ಲಿ ತಳ್ಳುಗಾಡಿಯಲ್ಲಿ ಆಹಾರ ತಯಾರಿಸಿ ಮಾರುವವರೂ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು. ಒಂದು ವೇಳೆ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮತ್ತು ಪರಿಣಾಮಕಾರಿ ಹಾನಿಕಾರಕ ರಾಸಾಯನಿಕ ವಸ್ತುಗಳು ಉಪಯೋಗಿಸಿದ್ದೆ ಅವರ ಪರವಾನಗಿ ರದ್ದು ಗೊಳಿಸಿ ಕಾನೂನು ಕ್ರಮ ಜರುಗುಸಲಾಗುತ್ತೆದೆ ಎಂದು ಹೇಳಿದರು.
ಚಂದು ಕಾಲೇಭಾಗ, ಮರೆಪ್ಪ ಗುಡಮಿ, ಮುತ್ತು, ಶಶಿ,ಬಸು, ಶ್ರೀಶೈಲ್, ನಿಂಬನ ರವಳಿ, ವಿಜು, ಪರಮಾನಂದ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.