ವಕ್ಫ್ ಹಟಾವೋ, ಕಿಸಾನ್ ಬಚಾವೋ :ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ
ಇಂಡಿ: ರಾಜ್ಯದ ವಿವಿಧ ಪಹಣ ಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದನ್ನು ತೆಗೆಯಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕರ‍್ಯಕ್ರರ್ತತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
ವಕ್ಫ್ ಹಟಾವೋ, ಕಿಸಾನ್ ಬಚಾವೋ’ ಘೋಷವಾಕ್ಯದಡಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಯನ್ನು ಬೆಂಬಲಿಸಿ ಮಠಾದಿಶರು ಪಾಲ್ಗೊಂಡಿದ್ದರು. ತಾಲೂಕಿನ ವಿವಿಧ ಭಾಗದ ಸ್ವಾಮೀಜಿಗಳು ಕೂಡ ಭಾಗವಹಿಸಿ ಬೆಂಬಲ ಸೂಚಿಸಿದರು.
ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ನಗರದ ಕುಂಬಾರ ಓಣಿ , ಹನುಮಾನ ದೇವಸ್ಥಾನ, ಮಹಾವಿರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಸಮಯ ರಸ್ತೆತಡೆ ನಡೆಸಿದರು. ನಂತರ ತಡವಲಗಾ ರಾಚೋಟೆಶ್ವರ ಶಿವಾಚಾರ್ಯರು ಮಾತನಾಡಿ, ರೈತರ ಪಹಣ ಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿದೆ. ಸರ್ಕಾರ ರೈತ ವಿರೋಧಿ ಎಂದು ತೋರಿಸಿಕೊಟ್ಟಿದೆ. ರೈತರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆಯಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಪಹಣ ಯಿಂದ ವಕ್ಫ್ ಮಂಡಳಿ ಆಸ್ತಿ ಎಂದು ತೆಗೆಸಿಲ್ಲ. ಕೂಡಲೇ ಅದನ್ನು ತೆಗೆಸಬೇಕು ಎಂದು ಒತ್ತಾಯಿಸಿದರು.
ರೈತರ ಪಹಣ ಯಿಂದ ಎಲ್ಲಿಯವರೆಗೆ ವಕ್ಫ್ ಬೋರ್ಡ್ ಆಸ್ತಿ ಎಂದು ಬರೆದಿರುವುದು ತೆಗೆಯುವುದಿಲ್ಲವೋ ಅಲ್ಲಿಯ ವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮಚಾರಿ ಸಂಪರ್ಕ ಪ್ರಮುಖ ಪ್ರಕಾಶ ಬಿರಾದಾರ ಮಾತನಾಡಿದರು.
ಪ್ರತಿಭಟನೆಯಲ್ಲಿ ಅಹಿರಸಂಗದ ಮಲ್ಲಿಕಾರ್ಜುನ ಶ್ರೀಗಳು, ವಿಶ್ವ ಹಿಂದೂ ಪರಿಷತ್ ತಾಲೂಕಾ ಉಪಾಧ್ಯಕ್ಷ ವಿಠ್ಠಲ ಹೊಸಮನಿ, ವಿಶ್ವ ಹಿಂದೂ ಪರಿಷತ್ ಸತ್ತಸಂಗ ಪ್ರಮುಖ ಬಸವರಾಜ ಜಮಖಂಡಿ, ಮಹೇಶ ಪೂಜಾರಿ, ಸೋಮನಾಥ ಹುಣಸಗಿ, ರೇವಣಸಿದ್ದ ಗುಣದಾಳ, ಪ್ರಶಾಂತ ಗೌಳಿ, ಸುನಿಲಗೌಡ ಬಿರಾದಾರ, ತುಳಜರಾಮ ಚವ್ಹಾಣ, ಈರಣ್ಣ ಸಿಂದಗಿ, ಶಾಂತಯ್ಯ ಪತ್ರಿಮಠ ಸೇರಿದಂತೆ ತಾಲೂಕಿನ ರೈತ ಬಾಂದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.
ಮಾರ್ಗದುದ್ದಕ್ಕೂ ದಿಕ್ಕಾರ, ದಿಕ್ಕಾರ ಸರ್ಕಾರಕ್ಕೆ ದಿಕ್ಕಾರ, ‘ವಕ್ಫ್ ಹಟಾವೋ, ಕಿಸಾನ್ ಬಚಾವೋ’ ಎಂದು ಘೋಷಣೆಗಳನ್ನು ಹಾಕಿದರು.