ಇದೇ ವೇಳೆ ಮಹಿಳಾ ಮುಖಂಡೆಯರಾದ ಮುಸರತ್ ನದಾಪ ಮಾತನಾಡಿ ವಕ್ಪ್ ಭೂಮಿಯು ನಾವು ಆರಾಧಿಸುವ ಅಲ್ಲಾಹನದ್ದು ಮುಸ್ಲಿಮರ ದಾರ್ಮಿಕ ಹಕ್ಕುಗಳನ್ನು ಮುಟ್ಟಲು ಹೊದರೆ ನಾಶವಾಗುತ್ತಿರಿ ? ಈ ಕೂಡಲೇ ವಕ್ಪ್ ತಿದ್ದುಪಡಿ ಮಸೂಧೆಯನ್ನು ಕೈಬಿಡಬೇಕು, ಸಹೋದರತೆ ಬಾತೃತ್ವ ಹೊಂದಿದ ಭಾರತದಲ್ಲಿ ಸರ್ವಧರ್ಮದವರಿಗೂ ಬದುಕ ನಡೆಸುವ ಹಕ್ಕನ್ನು ಸಂವಿದಾನದ ಪಿತಾಮಹ ಬಾಬಾ ಸಾಹೇಬ್ ಅಂಬೇಡ್ಕರವರು ಎಲ್ಲರಿಗೂ ನೀಡಿದ್ದಾರೆ , ಈ ಕೂಡಲೇ ಶಾಸಕರು ವಕ್ಪ್ ತಿದ್ದುಪಡಿಯನ್ನು ರದ್ದಾಗುವಂತೆ ವಿಧಾನಸಭೆಯಲ್ಲಿ ಒತ್ತಾಯಿಸಬೇಕು,ಸಮುದಾಯದ ಸಮಾಲೋಚನೆ ಮಾಡದೇ ಅನುಷ್ಠಾನ ಮಾಡಬಾರದು, ಅಧಿಕಾರಿಗಳು ಶಾಂತಿಯುತ ಜಾಗೃತಿ ಕಾರ್ಯಕ್ರಮ ಹಾಗೂ ಕಾನೂನು ಕಾರ್ಯಾಗಾರಗಳಿಗೆ ಸಹಕಾರ ನೀಡಬೇಕುಎಂದು ಅನೇಕ ಬೇಡಿಕೆಗಳನ್ನು ಮುಂದಿಟ್ಟ ಅವರು ಶತಶತಮಾನಗಳಿಂದ ಸೃಷ್ಠಿಕರ್ತನ ನಾಮದಲ್ಲಿರುವ ಭೂಮಿಯನ್ನು ಭದಲಾವಣೆ ಮಾಡಲು ಹೇಗೆ ಸಾಧ್ಯ ? ಈ ತಿದ್ದುಪಡಿ ಮಸೂಧೆಯ ನೈಜತೆ ಅರಿತರೆ ಸಂವಿದಾನ ವಿರೋಧಿ ಕಾರ್ಯಕ್ಕೆ ಕೇಂದ್ರ ಸರಕಾರ ಕೈಹಾಕಿದೆ ಎಂದು ಮಲ್ನೋಟಕ್ಕೆ ಕಾಣುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜೆಐಓ ಅಧ್ಯಕ್ಷರಾದ ಸುಮಯ್ಯಖಾನ್ ಮಾತನಾಡಿ ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಇದು ಸಂವಿಧಾನ ಮೂಲತತ್ವಗಳಾದ ಸಮಾನತೆ, ಧರ್ಮದ ಆಧಾರದ ಮೇಲೆ ತಾರತಮ್ಯದ ನಿಷೇಧ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ, ಈ ಮಸೂದೆಯನ್ನು ಕಾನೂನು ಆಗಿ ಮಾಡಲು ಅವಕಾಶ ಕೊಡಬಾರದು , ಕೇಂದ್ರ ಸರ್ಕಾರ ಬಹುಮತ ಪಡೆದ ದುರಹಂಕಾರದಲ್ಲಿ ವರ್ತಿಸುತ್ತಿದೆ. ಎಲ್ಲ ವಿರೋಧ ಪಕ್ಷಗಳು ಸಂವಿಧಾನ ವಿರೋಧಿ ಎಂದು ಸ್ಪಷ್ಟಪಡಿಸಿದ್ದರೂ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹೇರಲು ಹೊರಟಿದೆ ಎಂದು ಆರೋಪಿಸಿದರು.
ಈ ಸಂಧರ್ಭದಲ್ಲಿ ಮಹಿಳಾ ಜಮಾತೆ ಇಸ್ಲಾಮಿ ಹಿಂದು ಘಟಕದ ಅಧ್ಯಕ್ಷರಾದ ರಜಿಯಾ ಅಬಾಲೆ, ಮೆಹರೂನ್ ಹವೇಲಿ, ,ಖುಲ್ಸೂಮ್ ಖಾನ್, ಹಲೀಮಾ ಮಕಾಂದಾರ ನಜ್ಮಾ ಘಾಟಿ, ಮೆಹರುನಿಸಾ ಮೋಮಿನ್, ಸಪೂರಾ ಬಾಗವಾನ , ಮಹಕ್ ಖತೀಬ, ಆಫ್ರೀನ್ ಮೂಮಿನ, ಖುರ್ಷಿದಾ ನದಾಫ್, ಕುಬ್ಬರಾಹಾದಿಯ, ಬಿಸ್ಮಿಲ್ಲಾ ಹಡಲಗೇರಿ,ನಸೀಮಾ ಖಾನ್,ಆಸ್ಮಾ ಹಡಲಗೇರಿ,ಯಾಸ್ಮಿನ್ ಯಲಗಾರ ಇನ್ನೀತರರು ಪಾಲ್ಗೋಂಡಿದ್ದರು.