ವಕ್ಸ್ ಬೋರ್ಡ್ ಅಧ್ಯಕ್ಷರ ನೇಮಕಕ್ಕೆ ಹರ್ಷ:ಅಧ್ಯಕ್ಷ ತಾಜುದ್ದೀನ್
ಕಮಲಾಪುರ : ರಾಜ್ಯ ವಕ್ಫ ಬೋರ್ಡ್ ಕಲಬುರಗಿಯ ಅಲಿ ಅಲ್ ಹುಸೇನಿ ಅಧ್ಯಕ್ಷರಾಗಿ ಮತ್ತು ಸದಸ್ಯೆಯಾಗಿ ಆಯ್ಕೆಯಾದ ಕಲಬುರ್ಗಿ ಶಾಸಕಿ ಖನಿಜ್ ಫಾತಿಮಾ ಅವರ ನೇಮಕ ಮಾಡಿ ಆದೇಶ ಹೊರಡಿಸಿರುವ ಸರಕಾರದ ಕ್ರಮಕ್ಕೆ
ಕಮಲಾಪುರ ತಾಲೂಕಿನ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ತಾಜುದ್ದೀನ್ ಪಟೇಲ್ ಹರ್ಷ ವ್ಯಕ್ತಪಡಿಸಿದ್ದಾರೆ .
ಇಬ್ಬರ ಆಯ್ಕೆಯಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಂಘಟನೆಗೆ ಆನೆ ಬಲ ಬಂದಂತಾಗಿದೆ, ಅಲ್ಲದೆ ರಾಜ್ಯ ಕಾಂಗ್ರೆಸ್ ಸರಕಾರ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ