ಆಡಳಿತಾತ್ಮಕ & ಸರ್ವತೋಮುಖ ಅಭಿವೃದ್ಧಿಗಾಗಿ ಇಂಡಿ ಪ್ರತ್ಯೇಕ ಜಿಲ್ಲಾ ಕೇಂದ್ರವಾಗಬೇಕು : ಕನಿಪ ಸಂಘ
ಇಂಡಿ : ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇಂಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘ ಇಂಡಿ ಯಿಂದ ಅಸಿಸ್ಟೆಂಟ್ ಕಮಿಷನರ್ ಅಬೀದ್ ಗದ್ಯಾಳ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.
ಗುರುವಾರ ಪಟ್ಟಣದ ಆಡಳಿತ ಸೌಧದಲ್ಲಿ ಮನವಿ ಸಲ್ಲಿಸಿ ಕ.ನಿ.ಪ ಸಂಘದ ತಾಲೂಕು ಅಧ್ಯಕ್ಷ ಅಬುಶಾಮ್ ಹವಾಲ್ದಾರ್, ಪತ್ರಕರ್ತ ಉಮೇಶ್ ಬಳಬಟ್ಟಿ, ಯಲಗೊಂಡ ಬೇವನೂರ, ಸದ್ದಾಂ ಜಮಾದಾರ ಮಾತಾನಾಡಿದ ಅವರು, ವಿಜಯಪುರ ಜಿಲ್ಲೆ ಪ್ರಸಕ್ತ ಆಡಳಿತಾತ್ಮಕವಾಗಿ ದೊಡ್ಡ ಜಿಲ್ಲೆಯಾಗಿದ್ದು, ಆಡಳಿತಾತ್ಮಕವಾಗಿ ಸಮಸ್ಯೆಗಳು ಎದುರಾಗಿ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ.ಹಾಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಇಂಡಿಯನ್ನು ಪ್ರತ್ಯೇಕ ಜಿಲ್ಲಾವಾಗಿ ಘೋಷಣೆ ಮಾಡಬೇಕು. ಈ ತಾಲೂಕು ಅತ್ಯಂತ ಹಿಂದುಳಿದ್ದು, ಸಾಕ್ಷರತೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ,ಔದ್ಯೋಗಿಕ ಜೊತೆಗೆ ಇನ್ನಿತರ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಪಥದಲ್ಲಿ ಸಾಗಬೇಕಾಗಿದೆ. ಒಂದು ನಾಡು, ಒಂದು ದೇಶ ಅಭಿವೃದ್ಧಿಯ ದೃಷ್ಟಿಯಲ್ಲಿ ಕಾಣಬೇಕಾದರೆ ಆ ಪ್ರದೇಶ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣೊದು ಅವಶ್ಯಕ. ಆದರೆ ಬ್ರಿಟಿಷ್ ಕಾಲದಲ್ಲಿ ಉಪವಿಭಾಗವಾಗಿ ಕಾರ್ಯನಿರ್ವಹಿಸಿದ್ದ, ಸಾರ್ವಜನಿಕ ಸೇವೆ ನೀಡಿದ್ದ ಇಂಡಿ ತಾಲೂಕು ಇಲ್ಲಿಯವರೆಗೆ ಹಲವು ದೃಷ್ಟಿಯಲ್ಲಿ ಹಿಂದುಳಿದಿದೆ. ಹಾಗಾಗಿ ದೇವರಹಿಪ್ಪರಗಿ, ಆಲಮೇಲ, ಚಡಚಣ, ಸಿಂದಗಿ, ಇಂಡಿ ಬದಲಾವಣೆ ಕಾಣಿಸಬೇಕಾಗಿದೆ. ರಾಜ್ಯ, ರಾಷ್ಟ್ರದ ಬೆಳವಣಿಗೆಯಲ್ಲಿ ಇಂಡಿ ಜಿಲ್ಲಾ ಕೇಂದ್ರವಾಗುವ ಮೂಲಕ ಪ್ರೇರಕವಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷಣ ಹಿರೆಕುರಬರ ಲಾಲಸಿಂಗ ರಾಠೋಡ, ನಾಗರಾಜ ಆಸಂಗಿ, ಶಂಕರ್ ಜಮಾದಾರ,
ಅಲ್ಲಾಬಕ್ಷ ಗೋರೆ, ಅರವಿಂದ ಖಡೆಖಡೆ, ಸದ್ದಾಂ ಹುಸೇನ
ಜಮಾದಾರ, ಅಂಬಣ್ಣ ರಾಂಪೂರ, ಜಹಾಂಗೀರಬಾಷಾ ದೇಸಾಯಿ, ಪ್ರವೀಣ ಮಠ ಮತ್ತಿತರರಿದ್ದರು.