ಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಸ್ಮರಣೀಯ
ಇಂಡಿ : ವಿಶ್ವ ಕರ್ಮ ಎಂದರೆ ವಿಶ್ವದ ಸೃಷ್ಟಿಕರ್ತ, ಭಾರತದ ಕಲೆ ಸಂಸ್ಕೃತಿ ಪರಂಪರೆ ಶ್ರೀಮಂತವಾಗಲು ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ ವಿಶ್ವಕರ್ಮ ಉಳಿದರೆ ಸಂಸ್ಕೃತಿ ಕಲೆ ಪರಂಪರೆ ಉಳಿಯಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಸುಜೀತ ಲಾಳಸಂಗಿ ಹೇಳಿದರು.
ಪಟ್ಟಣದ ಅಗಸಿಯ ಹನುಮಾನ ದೇವಸ್ಥಾನ ಹತ್ತಿರ ವಿಶ್ವಕರ್ಮ ಸಮುದಾಯದಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ರಮೇಶ ಪೊದ್ದಾರ ಮಾತನಾಡಿ ವಸ್ತುವಿಗೆ ಆಕೃತಿ ರೂಪವನ್ನು ನೀಡಿ ವಿಶ್ವವೇ ನೋಡುವಂತೆ ಮಾಡಿ ವಿಶ್ವಕ್ಕೆ ಸುಂದರ ರೂಪ ಕೊಟ್ಟ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದರು. ಬೇಲೂರ ಹಳೆಬಿಡು ಪಟ್ಟದಕಲ್ಲು ಬದಾಮಿಯಲ್ಲಿನ ಅನೇಕ ದೇವಸ್ಥಾನಗಳ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದ ಸೇವೆ ಅಸ್ಮರಣೀಯ ಎಂದರು.
ಬಂಗಾರ ವ್ಯಾಪಾರಸ್ಥ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಮಾತನಾಡಿದರು.
ಸಮಿತಿಯ ಸದಸ್ಯರಾದ ಸಂದೀಪ ಧನಶೆಟ್ಟಿ, ಶ್ರೀಶೈಲ ಅರ್ಜುಣಗಿ, ವಿಜಯಕುಮಾರ ಮಹೀಂದ್ರಕರ, ದೀಲಿಪ ಪತ್ತಾರ, ಬನ್ನಪ್ಪ ಸಾತಲಗಾಂವ, ಚಂದ್ರು ಡಾಂಗೆ ಶಶಿಧರ ಕೊಪ್ಪ ಸಂಜು ಪತ್ತಾರ ಇವರನ್ನು ಸನ್ಮಾನಿರಲಾಯಿತು.
ದಯಾನಂದ ಪತ್ತಾರ, ಅಜೀತ ಲಾಳಸಂಗಿ, ರಾಘವೇಂದ್ರ ಲಾಳಸಂಗಿ, ಪ್ರವೀಣ ಪೊದ್ದಾರ, ಉಮೇಶ ಪತ್ತಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಅಗಸಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸುಜೀತ ಲಾಳಸಂಗಿ ಮಾತನಾಡಿದರು.



















