ಸರಳವಾಗಿ ವಿಶ್ವಕರ್ಮ ಜಯಂತಿ ಆಚರಣೆ
ಹನೂರು : ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ತಹಸಿಲ್ದಾರ್ ಗುರುಪ್ರಸಾದ್ ರವರು ವಿಶ್ವಕರ್ಮ ಮಹರ್ಷಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಗ್ರಾಮ ಸಹಾಯಕ ಸಿದ್ದರಾಜು, ಸಮುದಾಯದ ಮುಖಂಡರುಗಳಾದ ಕುಮಾರಚಾರಿ, ರಾಜೇಂದ್ರ, ರವೀಂದ್ರ, ಮುತ್ತುರಾಜು, ಮುತ್ತುರಾಜು, ಇನ್ನೂ ಮುಂತಾದವರು ಹಾಜರಿದ್ದರು.