ಗ್ರಾಮೀಣ ಭಾಗದಲ್ಲಿ ವಿಶ್ವಭಾರತಿ ಸಂಸ್ಥೆಯ ಸೇವೆ, ಶ್ರಮ ಅನನ್ಯ
ಇಂಡಿ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ, ವಿಶ್ವಭಾರತಿ ಸಂಸ್ಥೆಯ ಸೇವೆ, ಶ್ರಮ ಅನನ್ಯ ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷÀ ಬಿ.ಡಿ.ಪಾಟೀ¯ ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಶಿಕ್ಷಣ ಸಮೂಹದ ಶಾಲೆ ಮತ್ತು ವಸತಿ ನಿಲಯದ ನೂತನ ಕಟ್ಟಡದ ಉಧ್ವಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಇಂತಹ ಶಿಕ್ಷಣ ಸಂಸ್ಥೆ ಭವ್ಯವಾದ ಶಾಲೆ ಮತ್ತು ವಸತಿ ನಿಲಯದ ಕಟ್ಟಡ ಇಂದು ಉದ್ವಾಟನೆಗೋಳ್ಳುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಕಾತ್ರಾಳ-ಬಾಲಗಾಂವದ ಡಾ|| ಅಮೃತಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಂಸ್ಥೆಯಲ್ಲಿ ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ನೋಡೊದರೆ ಇಲ್ಲಿನ ಶೀಕ್ಷಣದ ಗುಣಮಟ್ಟ ಮತ್ತು ಶಾಲೆಯ ಶಿಕ್ಷಕರ ಮೇಲೆ ಜನರು ಇಟ್ಟಿರುವ ನಂಬಿಕೆ ತಿಳಿಯುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಶಾಂತಿ, ಶಿಕ್ಷಣ, ಸಂಸ್ಕಾರ ಉತ್ತಮವಾಗಿ ಬೆಳೆಸಿದ್ದಾರೆ ಎಂದರು.
ಖೇಡಗಿಯ ವಿರಕ್ತಮಠದ ಶಿವಬಸವರಾಜೇಂದ್ರ ಶ್ರೀಗಳು ಆಶಿರ್ವಚನ ನೀಡಿ, ಭವ್ಯವಾದ ಕಟ್ಟಡವಾಗಲು ಸ್ವಾಮಿಜಿಗಳ ಆರ್ಶಿವಾದ ಹಾಗೂ ಕಲ್ಮನಿ ಪರವಾರದ ಪ್ರಾಮಾಣ ಕ ಪಯತ್ನದಿಂದ ಇದೆಲ್ಲ ಸಾದ್ಯಾವಾಗಿದೆ ಎಂದರು.
ಸಿದ್ದರಾಮೇಶ್ವರ ಪಟ್ಟದೇವರು ಮಾತನಾಡಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೈಯುತ್ತಿರುವುದರ ಕಲ್ಮನಿ ಪರಿವಾರದವರ ಸೇವೆ ಅನನ್ಯ ಎಂದರು.
ಬೇವನೂರ ಗ್ರಾಮದ ಪೂಜ್ಯ ವೇ. ದಯಾನಂದ ಸ್ವಾಮಿಗಳವರಿಗೆ ಶಿಕ್ಷಣ ಸಂಸ್ಥೆಯ ವತಿಯಿಂದ ತುಲಾಬಾರ ಕಾರ್ಯಕ್ರಮ ನೆರವೇರಿತು.
ದಿವ್ಯಸಾನಿಧ್ಯವನ್ನು ಗೋಳಸಾರದ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು ವಹಿಸಿದ್ದರು, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ.ಜಿ.ಕಲ್ಮನಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಜಟ್ಟೆಪ್ಪ ರವಳಿ, ಶಿಕ್ಷಣ ಸಂಯೋಚಕರಾದ ಎ.ಓ.ಹೂಗಾರ, ಪಿ.ಎಸ್.ದಳವಾಯಿ, ಎ.ಎಸ್.ಹುಣಸಗಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಭೀಮರಾಯ ಮೇತ್ರಿ, ದೊಡ್ಡಪ್ಪ ಪೂಜಾರಿ, ಶಂಕರಗೌಡ ಬಿರಾದಾರ, ಸೋಮನಾಥ ಕುಂಬಾರ, ಶ್ರೀಶೈಲ ಲಾಳಸಂಗಿ, ಆರ್.ಸಿ.ಮೇತ್ರಿ, ಶ್ರೀಧರ ಉಕ್ಕಲಿ, ಜಡಗಪ್ಪ ಹಂಜಗಿ, ಅರವಿಂದ ಮೈದರಗಿ, ಬಸವರಾಜ ಅರ್ಜುಣಗಿ, ಅಂದಪ್ಪ ಹಂದ್ರಾಳ, ಗುರಪ್ಪ ಕರಜಗಿ, ಸಾತಪ್ಪ ಪರಗೊಂಡ, ಶೀವಯೋಗಿಪ್ಪ ಅಜಗೊಂಡ, ಅರ್ಜುನ ತಡ್ಲಗಿ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ವಿ.ಜಿ.ಕಲ್ಮನಿ, ಶಿಕ್ಷಕರಾದ ಲಕ್ಕಪ್ಪ ಕರಜಗಿ, ತುಕಾರಾಮ ಚವ್ಹಾಣ, ಶಿವಾನಂದ ಕಲ್ಮನಿ, ಪ್ರಕಾಶ ಕಲ್ಮನಿ, ಸಚಿನ್ ಅಡಿಗುಂಡಿ, ಥಾಮಸ್ ಎಸ್, ಜೆ.ಎ.ಬಿರಾದಾರ, ರಾಜೇಶ್ವರಿ ಗೌಡಾ, ಆಯಿಶಾ, ರಾಜಶ್ರೀ ಸಂಗಮ, ಹಸನ್, ಸವಿತಾ ವಳಸಂಗ, ಎಸ್.ಎಮ್. ಬಾಷಗಿ, ಸಂಗೀತಾ ಮಾನೆ, ಚಿನತ್ ಶೇಖ, ಅನಿತಾ ಗೌಡ, ಬಿ.ಕೆ.ಉಕಲಿ, ಶಿವಲೀಲಾ, ಗಿರಿಜಾ ಬಾಗೇವಾಡಿ. ರಾಜೇಶ್ವರಿ ಗೌಡ, ಜೆ.ಎ.ಬಿರಾದಾರ, ಹಸನ ಚಿಕಳಿ, ಸಂಗೀತಾ ಮಾನೆ, ಸವಿತಾ ವಳಸಂಗ, ಸ್ವಂದನಾ, ಶಿವಲೀಲಾ, ರಾಜಶ್ರೀ, ಸಾರಾ, ಗಿರಿಜಾ, ಹಿಂಬಾರ, ಮಧು, ಹುಲಿಕುಂಟೆಪ್ಪ ಪೂಜಾರ ಇದ್ದರು.
ಪಿ.ಜಿ.ಕಲ್ಮನಿ ಸ್ವಾಗತಿಸಿ, ವಂದಿಸಿದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವಭಾರತಿ ವಿದ್ಯಾಕೇಂದ್ರ ಶಿಕ್ಷಣ ಸಮೂಹದ ಶಾಲೆ ಮತ್ತು ವಸತಿ ನಿಲಯದ ನೂತನ ಕಟ್ಟಡ ಉಧ್ವಾಟನಾ ಸಮಾರಂಭದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು.