ಇಂಡಿ : ವಿಷ್ಣುದಾದಾ, ಸಾಹಸ ಸಿಂಹ, ಅಭಿನಯ ಭಾರ್ಗವ ಹೀಗೆ ಹಲವಾರು ಹೆಸರುಗಳು ಡಾ.ವಿಷ್ಣುವರ್ಧನ್ ಅವರಿಗಿದೆ. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಎದೆಯಲ್ಲಿ ಸದಾ ನೆಲೆಸಿರೋ ವಿಷ್ಣು ಸರ್ ನಿಜಕ್ಕೂ ಅಮರ ಎಂದು ಬಿ.ಡಿ ಪಾಟೀಲ ಮಾತನಾಡಿದರು.
ಪಟ್ಟಣದ ವಿಜಯಪುರ ರಸ್ತೆಯ ಕಾಂಗ್ರೆಸ್ ಕಾರ್ಯಾಲಯದ ಹತ್ತೀರ ವಿರುವ ಡಾ.ವಿಷ್ಣುವರ್ಧನ ವೃತ್ ದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತಾನಾಡಿದರು.
ವಿ.ಎಸ್.ಎಸ್. ವಿಷ್ಣು ಸೇನಾ ಸಂಘಟನೆಯು ಡಾ. ವಿಷ್ಣುವರ್ಧನ ೭೨ ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ವನ್ನು ವಿಷ್ಣು ವೃತ್ ದಲ್ಲಿ ಆಯೋಜನೆ – ಗೊಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು. ಕೈ ಶಾಸಕರ ಚಿರಂಜೀವಿ ವಿಠ್ಠಲಗೌಡ ಪಾಟೀಲ, ಸಂಘದ ಅಧ್ಯಕ್ಷ ಅಂಬರೀಶ್ ಕೊರಳ್ಳಿ ಮಾತನಾಡಿದ ಅವರು, ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬ. ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಅಪರೂಪದ ಚಿತ್ರಗಳ ಮೂಲಕ ಅವರು ಸದಾ ನಮ್ಮೊಂದಿಗಿದ್ದಾರೆ.
ಆ ಖುಷಿಯಲ್ಲೇ ವಿಷ್ಣುವರ್ಧನ್ ಅವರ ಅಭಿಮಾನಿಗಳು ಹುಟ್ಟುಹಬ್ಬದ ದಿನದಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರನ್ನು ಎಲ್ಲರೂ ಆರಾಧಿಸುತ್ತಾರೆ. ಅದರಲ್ಲೂ ನಿಂಬೆ ನಾಡಿನ ಇಂಡಿ ಪಟ್ಟಣದಲ್ಲಿ ಡಾ.ವಿಷ್ಣುವರ್ಧನ ವೃತ ಮತ್ತು ಸಂಘ ಕಟ್ಟಿಕೊಂಡಿದ್ದು ಕಲಾವಂತರಿಗೆ ಗೌರವಿಸಿದಂತೆ. ಜೊತೆಗೆ ಡಾ ವಿಷ್ಣುವರ್ಧನ ಅವರ ಹಲವು ಚಿತ್ರಗಳು ಇತಿಹಾಸ ಸೃಷ್ಟಿ ಮಾಡದಂತಿವೆ. ಅದರಲ್ಲೂ ಬಂಧನ, ಯಜಮಾನ, ವಿಷ್ಣುಸೇನಾ, ಸೂರಪ್ಪ, ಸೂರ್ಯವಂಶಿ ಯಂತೆ ವಿಶೇಷ ಚಿತ್ರಗಳು ನಮ್ಮ ನಾಡಿಗೆ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶೀಲವಂತ ಉಮರಾಣಿ, ಅನೀಲ ಜಮಾದಾರ, ಮಹಿಬೂಬ ಬೇನೂರ, ಸಿದ್ದು ಡಂಗಾ, ರಾಜು ಕುಲಕರ್ಣಿ, ಮತ್ತು ಎಮ್ ಪಿ, ಶೀವು ಬಡಿಗೇರ, ದಯಾನಂದ ಹೊಸಮನಿ, ಪ್ರದೀಪ್ ಪವಾರ, ಉದಯ ಹೊಸಮನಿ, ಶಂಕರೆಪ್ಪ ಕುಂಬಾರ, ಬಸೀರ್ ಶೇಖ, ಗೀರಿಶ್ ಪಾಟೀಲ ಇನ್ನೂ ಅನೇಕರು ಉಪಸ್ಥಿತರಿದ್ದರು.