ಲಿಂಗಸೂಗೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯ ಹಾಗೂ ವಾರ್ಡ್ ಮತ್ತು ಗ್ರಾಮ ಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಹಾಗೂ ಪಾರದರ್ಶಕ ಆಡಳಿತ ಒದಗಿಸುವ ನಿಟ್ಟಿನಲ್ಲಿ ಮೂರು ತಿಂಗಳಿಗೊಮ್ಮೆ ಗ್ರಾಮ ಸಭೆ ಮಾಡಬೇಕು.
ಅಲ್ದೆ ಪಂಚಾಯತ್ ನ ಹಲವು ಯೋಜನೆಗಳನ್ನು ಗ್ರಾಮ ಸಭೆ ಗಳ ಮೂಲಕ ವೇ ಅಂತಿಮಗೊಳಿಸಬೇಕು ಎಂದು ಆದೇಶಿಸಿದೆ. ಹಾಗೆಯೇ ಈ ಗ್ರಾಮ ಸಭೆಗೆ ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಗ್ರಾಮ ಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿರಬೇಕು. ಗ್ರಾಮ ಸಭೆ ನಡೆಸುವ ಮುಂಚಿತವಾಗಿ ಗ್ರಾಮ ಸಭೆ ನಡೆಸುವ ಕುರಿತು ಸಾರ್ವಜನಿಕ ವಲಯಗಳಲ್ಲಿ ಭಿತ್ತಿ ಪತ್ರಗಳನ್ನ ಅಂಟಿಸಿ, ಡಂಗೂರ ಸಾರಬೇಕು.
ಸಭೆಗೆ ಗ್ರಾಮದ ಒಟ್ಟು ಮತದಾರರ 1/10 ರಷ್ಟು ನೂರು ಜನ ರಷ್ಟು ಕೋರಂ ಭರ್ತಿ ಆಗಿರಬೇಕು. ಸಾಧ್ಯಾವಾದ ಮಟ್ಟಿಗೆ 1/3 ರಷ್ಟು ಕಡಿಮೆ ಯಿಲ್ಲದ ಮಹಿಳಾ ಸದಸ್ಯರು ಹಾಜರಿತಕದ್ಧು ಎಂಬ ನಿಯಮಗಳು ಇದ್ದಾಗ್ಯೂ, ಈಚನಾಳ ಗ್ರಾಮ ಪಂಚಾಯತ್ ಪಿಡಿಒ ಎಂ. ಆರ್. ಇ.ಜಿ.ಎ. ಯೋಜನೆಯ ನಮ್ಮ ಹೊಲ ನಮ್ಮ ದಾರಿ ಕಾಮಾಗಾರಿ ಗುಚ್ಛ ತಯಾರಿಸುವ ಸಲುವಾಗಿ ಕರೆದ ಗ್ರಾಮ ಸಭೆಯಲ್ಲಿ ಮೇಲಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕೇವಲ ಒಬ್ಬ ಸದಸ್ಯ ಮಾತ್ರ ಈ ಸಭೆಗೆ ಹಾಜರಾಗಿದ್ದರು. ಯಾವೋಬ್ಬ ಮಹಿಳಾ ಸದಸ್ಯರಾಗಲಿ ಅಥವಾ ಮಹಿಳಾ ಸಾರ್ವಜನಿಕರಾಗಲಿ ಭಾಗಿಯಾಗಿಲ್ಲ. ಅದಲ್ಲದೇ ಕೇವಲ ಒಂದು ದಿನದ ಹಿಂದೆ ಸಾರ್ವಜನಿಕ ವಲಯದಲ್ಲಿ ಸಭೆ ಯ ನೋಟಿಸ್ ಅಂಟಿಸಿದ್ದು, ಅಧಿಕಾರಿಯ ಬೇಜವಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಕೇವಲ 20 ಜನ ಸಭೆಯಲ್ಲಿ ಭಾಗಿಯಾಗಿದ್ದರೂ ಸಭೆ ಪ್ರಾರಂಭದಲ್ಲೇ ಹಾಜರಾಗಿರುವ ಸಾರ್ವಜನಿಕರ ಸಹಿ ಹಾಕಿಸುವ ಮೂಲಕ ಸಭೆ ಯಶಸ್ವಿಯಾಗಿದೆ ಎಂದು ಸಭೆ ಮುಗಿಸಿದ್ದಾರೆ. ಘಟನೆ ಕುರಿತು ರೈತ ಮುಖಂಡ ಸಹದೇವಪ್ಪ ಕರಡಿ ಪಿಡಿಒ ವಿರುದ್ಧ ಸಭೆಯಲ್ಲಿಯೇ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆದಪ್ಪ ಮೇಟಿ, ಸದಸ್ಯ ಮರಿಯಪ್ಪ ಕಟ್ಟಿಮನಿ, ಅಮರೇಶ ಪೂಜಾರಿ, ಆನಂದ ಕುಂಬಾರ, ಅಮರೇಶ ಕಡಿ, ಗದ್ಧೆಪ್ಪ ಕನ್ನಾಳ, ಉಜ್ಜಪ್ಪ ಪೂಜಾರಿ ಇನ್ನಿತರರಿದ್ದರು.