ವಿಜಯಪುರ ಡಿಡಿಪಿಐ ಹಾಗೂ ಇಬ್ಬರು ಉಪನ್ಯಾಸಕರು ಅಮಾನತು..!
ವಿಜಯಪುರ : ಐಇಡಿಎಸ್‌ಎಸ್ ಯೋಜನೆ ಅನುಷ್ಠಾನಗೊಳಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಹಾಗೂ ಡೈಟ್‌ನ ಇಬ್ಬರು ಉಪನ್ಯಾಸಕರನ್ನು ಸೇವೆಯಿಂದ ಅಮಾನತುಗೊಳಿಸಿ, ಸರಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.
ಡಿಡಿಪಿಐ ಎನ್.ಎಚ್. ನಾಗೂರ, ಡೈಟ್‌ನ ಹಿರಿಯ ಉಪನ್ಯಾಸಕರಾದ ಎ.ಎಸ್. ಹತ್ತಳ್ಳಿ ಹಾಗೂ ಎಸ್.ಎ. ಮುಜಾವರ ಅಮಾನತುಗೊಂಡವರು.
ಈ ಮೂವರು 2009 ಮತ್ತು 2011-12 ರಲ್ಲಿ ಬೇರೆ ಬೇರೆ ತಾಲೂಕು ಕ್ಷೇತ್ರ ಶಿಕ್ಷಣಾಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇದೇ ಸಾಲಿನಲ್ಲಿ ಐಇಡಿಎಸ್‌ಸ್ ಯೋಜನೆಯಡಿ ಅನುದಾನ ದುರುಪಯೋಗ ಮಾಡಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗೆ ಈ ಮೂವರು ಶಿಫಾರಸು ಮಾಡಿದ ಆರೋಪದ ಮೇರೆಗೆ ಇಲಾಖೆ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರದ ಈನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.