ವಿಜಯಪುರ| ಬೃಹತ್ ಉದ್ಯೋಗ ಮೇಳ
ವಿಜಯಪುರ : ಜಿಲ್ಲೆಯ ಜನತೆಗೆ ಉದ್ಯೋಗ ಹುಡುಕಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಹಾಗೂ ಜಿಲ್ಲಾ ಉದ್ಯೋಗ ಕಚೇರಿ ವಿಜಯಪುರ ಮತ್ತು ನಿರ್ಮಾನ್ ಎನ್ ಜಿ ಓ ಕಲಬುರ್ಗಿ ಇವರ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳ 500 ಕ್ಕೂ ಅಧಿಕ ಯುವಕ– ಯುವತಿಯರ ಪೈಕಿ ಐಟಿ, ಬಿಟಿ ಸೇರಿದಂತೆ ಒಟ್ಟು 16 ಕಂಪನಿಗಳು ಭಾಗವಹಿಸಿದ್ದು 45 ಯುವಕ- ಯುವತಿಯರಿಗೆ ಸ್ಥಳದಲ್ಲೇ ಉದ್ಯೋಗದ ಆದೇಶ ನೀಡಿದವು.
ಇನ್ನೂ 81 ಅಭ್ಯರ್ಥಿಗಳನ್ನು ಅಂತಿಮ ಹಂತಕ್ಕೆ ಆಯ್ಕೆಯನ್ನು ಮಾಡಲಾಯ್ತು 431 ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿದ್ದರು.
ಈ ಬೃಹತ್ ಮೇಳಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಪದವೀಧರರು ಹಾಗೂ ವಿದ್ಯಾರ್ಥಿಗಳ ದಂಡು ಹರಿದುಬಂತು. ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲಾಯಿತು. ಪಿಯುಸಿ, ಐಟಿಐ, ಡಿಪ್ಲೊಮಾ ತೇರ್ಗಡೆಯಾದವರು ಮತ್ತು ಪದವೀಧರರು ಸೇರಿದಂತೆ ನೂರ ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿ, ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾದರು.
ಆಯಾ ಕಂಪನಿಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಸಂದರ್ಶನ ನಡೆಸಿ, ಪ್ರತಿಭಾವಂತರನ್ನು ನೇಮಕ ಮಾಡಿಕೊಂಡರು. ಬೆಳಿಗ್ಗೆ 10ಕ್ಕೆ ಆರಂಭಗೊಂಡ ನೇಮಕ ಪ್ರಕ್ರಿಯೆ ಮಧ್ಯಾಹ್ನ 4ಕ್ಕೆ ಮುಕ್ತಾಯಗೊಂಡಿತು.
ವಿದ್ಯಾರ್ಹತೆ ಹಾಗೂ ಹುದ್ದೆ ಆಧರಿಸಿ ಸಂಬಳ ಸಿಗುವಂತಹ ಕೆಲಸಗಳನ್ನು ಪಡೆಯಲು ಅನುಕೂಲವಾಗಲೆಂದು ಈ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದು. ಇದರ ಲಾಭ ಉದ್ಯೋಗ ಆಕಾಂಕ್ಷೆಗಳು ಪಡೆದುಕೊಳ್ಳಬೇಕು’ ಎಂದು ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಇರ್ಫಾನ್ ಉದ್ಯೋಗ ಆಕಾಂಕ್ಷೆಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಹೇಶ್ ಮಳವಾಡಕರ್, ನೌಕರಿ ಪಡೆಯಬೇಕಾದರೆ ಇಂತಹ ಮೇಳಗಳು ನಡೆಯಬೇಕು. ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದು ಕಷ್ಟವಾಗಿದೆ ಹೀಗಾಗಿ ಉದ್ಯೋಗ ವಿನಿಮಯ ಕೇಂದ್ರದಲ್ಲಿರುವ ಸೌಕರ್ಯಗಳ ಲಾಭ ಪಡೆಯಬೇಕು’ ಎಂದು ಉದ್ಯೋಗ ಆಕಾಂಕ್ಷಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರೂ ಮತ್ತು ಕಾರ್ಯಕ್ರಮದ ಆಯೋಜಕರಾದ ಅರವಿಂದ ಕೋಟಿ,ಬಿ,ಎಸ್, ಥೋರತ,ಹಸನಸಾಬ ಜಮಾದಾರ ಹಾಗೂ ಉದ್ಯೋಗ ಆಕಾಂಕ್ಷೆಗಳು ಭಾಗಿಯಾಗಿದ್ದರು.