ವಿಜಯಪುರ | ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ನೇಮಕಾತಿ ಹೈ ಕೋರ್ಟ್ ತಡೆಯಾಜ್ಞೆ
ಇಂಡಿ : ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲೆಯ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅದನ್ನು ಕಲ್ಬುರ್ಗಿ ಹೈ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ಆದೇಶ ಸಂಖ್ಯೆ ಮಮ ಇ 154 ಐಸಿಡಿ 2020 ಮತ್ತು 03-12-2022 ರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ ಮಾರ್ಗಸೂಚಿಯಂತೆ ಹಾಗೂ ಜಿಲ್ಲಾಧಿಕಾರಿ ಕಡತ ಅನುಮೋದನೆಯಂತೆ ಸಮ:ಉನಿವಿ/ಮಮಅಇ/ಅಂ.ಕಾ.ಕ/ಅಂ.ಸ/ ನೇಮಕಾತಿ/2024/25 ರ, ದಿನಾಂಕ 09/10/2024 ರಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.
ಒಟ್ಟು ಅಂಗನವಾಡಿ ಕಾರ್ಯಕರ್ತೆ 313 ಸಹಾಯಕಿ 857 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಆದರೇ ಇಂಡಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ 67 ಹುದ್ದೆ ಅದರಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇವಲ 1 ಹುದ್ದೆ ಮೀಸಲಾತಿ ನೀಡಿದ್ದು ಸರಕಾರದ ಮಾರ್ಗ ಸೂಚಿಪಾಲನೆಯಾಗಿಲ್ಲ. ಸರಕಾರದ ಆದೇಶ ದಿನಾಂಕ 28/12/2022 ರ ಸುತೋಲೇ ಪ್ರಕಾರ ರಾಜ್ಯದಲ್ಲಿ SC ಗೆ 17% ST ಗೆ 7% ಮೀಸಲಾತಿ ಕೊಡಬೇಕು ಎಂದು ಸ್ಪಷ್ಟವಾಗಿ ಆದೇಶ ಇದೆ. ಆದರೆ ಅಧಿಕಾರಿಗಳು ಈ ಆದೇಶ ಪಾಲಿಸದೆ ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಮೀಸಲಾತಿ ಕಲ್ಪಿಸಿಲ್ಲ ಎಂದು ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ವಿಜಯಲಕ್ಷ್ಮಿ ರಾಮಣ್ಣ ಕೋಳಿ, ಚಂದ್ರಾಮ ತಳವಾರ ಹೈ ಕೋರ್ಟ್ ಮೋರೆ ಹೋಗಿದ್ದರಿಂದ ಈ ಸದ್ಯ ಕಲ್ಬುರ್ಗಿ ಹೈ ಕೋರ್ಟ್ ಡಿಸೆಂಬರ್ 3, 2024 ರಂದು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.