ವಿಜಯಪುರ | ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ 145ನೇ ಜಯಂತಿ
ವಿಜಯಪುರ : ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ದೇಶದ ಮುಂಚೂಣಿ ಕಾಲೇಜುಗಳಲ್ಲಿ ಒಂದಾಗಿ ಮಾಡೋಣ ಎಂದು ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಡಾ. ಅನೀಲಕುಮಾರ ಬಿ.ಪಾಟೀಲ (ಲಿಂಗದಳ್ಳಿ) ಹೇಳಿದ್ದಾರೆ.
ಇಂದು ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ 145ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳಕಟ್ಟಿ ಅವರು ಕಟ್ಟಿರುವ ಬಿ.ಎಲ್.ಡಿ.ಇ ಸಂಸ್ಥೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದೆ. ಈ ಸಂಸ್ಥೆಯಡಿಯಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಯ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಜನ ನನಗೆ ಕರೆ ಮಾಡುತ್ತಾರೆ. ಇಲ್ಲಿರುವ ಪಂಚಕರ್ಮ ಸೇರಿದಂತೆ ನಾನಾ ಆರೋಗ್ಯ ಸೇವೆಗಳು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ದೊರೆಯುತ್ತಿರುವುದು ಈ ಭಾಗದ ಜನರಿಗೆ ವರದಾನವಾಗಿದೆ. ಹಳಕಟ್ಟಿಯವರ ಆಶಯದಂತೆ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳ ಉತ್ತಮ ಕಾರ್ಯಗಳ ಮೂಲಕ ದೇಶದ ಮುಂಚೂಣಿ ಸಂಸ್ಥೆಗಳಲ್ಲಿ ಉನ್ನತ ಸ್ಥಾನಕ್ಕೆ ತರಲು ಎಲ್ಲರು ಶ್ರಮಿಸೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಳಕಟ್ಟಿ ಅವರ ಮೊಮ್ಮಗ ಗಿರೀಶ ಹಳಕಟ್ಟಿ, ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಹಿರಿಯ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ, ಡಾ. ಡಿ.ಎನ್. ಧರಿ, ಡಾ.ಕೆ.ಎ. ಪಾಟೀಲ, ಡಾ. ಉಮಾ ಪಾಟೀಲ, ಡಾ. ರೇಣುಕಾ ತೆನಿಹಳ್ಳಿ, ಡಾ.ಪಿ.ಜಿ.ಗಣ್ಣೂರ, ಡಾ. ಸೀತಾ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
BLDEA’s AVS College Halakatti Jayanti
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ 145ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅನೀಲಕುಮಾರ ಪಾಟೀಲ, ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ಡಾ. ಅಶೋಕ ಪಾಟೀಲ, ಡಾ. ಸತೀಶ ಪಾಟೀಲ, ಡಾ. ಡಿ.ಎನ್. ಧರಿ, ಡಾ.ಕೆ.ಎ. ಪಾಟೀಲ, ಡಾ. ಉಮಾ ಪಾಟೀಲ, ಡಾ. ರೇಣುಕಾ ತೆನಿಹಳ್ಳಿ, ಡಾ.ಪಿ.ಜಿ.ಗಣ್ಣೂರ, ಡಾ.ಸೀತಾ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.