ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ವಿಠ್ಠಲ ಬೇವಿನಕಟ್ಟಿ
ವಿಜಯಪುರ : ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ವಿಠ್ಠಲ ಬೇವಿನಕಟ್ಟಿ ಅವರನ್ನು ಅಯ್ಕೆ ಮಾಡಿ ರಾಜ್ಯಧ್ಯಕ್ಷ ಎಮ್ ಟಿ ಸುರೇಶ ಕಂಠಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ರಿ ಬೆಂಗಳೂರು, ಆಶ್ರಯದಲ್ಲಿ ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮದ ವೇದಿಕೆ ರೂಪಿಸುವ, ಆಯೋಜಿಸುವ ಹಾಗೂ ಕಾರ್ಯಕರ್ತರ ನೇಮಕ ಮಾಡುವ ಜವಾಬ್ದಾರಿ ಈ ಆದೇಶ ಪತ್ರದ ಮೂಲಕ ನೀಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಧ್ಯಕ್ಷ ಎಮ್ ಟಿ ಸುರೇಶ್ ಕಂಠಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.