ಸಿಂದಗಿ : ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ ದೇಶದ ೧೨ ಕೋಟಿ ಮಹಿಳೆಯರಿಗೆ ಮನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ೨೭ ಲಕ್ಷ ಶೌಚಾಲಯ ಕೊಡುವ ಮೂಲಕ ಮಹಿಳಾ ಸಶಕ್ತಕರಣ ಮಾಡಿದ್ದಾರೆ. ದೇಶದಲ್ಲಿ ೪ ನೂರು ಟ್ರೇನ್ ಸಂಚಾರ ಮಾಡುತ್ತೆವೆ ಇದು ಅಭಿವೃದ್ಧಿ ಅಲ್ಲವೇ..?
ಭಾರತದಲ್ಲಿ 2014ರಲ್ಲಿ ಕೇವಲ 350 ಕಿ.ಮೀ ಅಪ್ಟಿಕಲ್ ಕೇಬಲ ದೇಶದಲ್ಲಿ ಪಸರಿಸಿತ್ತು, ಇಂದು 2 ಲಕ್ಷ ಕಿಲೋ ಮೀಟರ್ ವರೆಗೆ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮೊದಲು ಸ್ಮಾರ್ಟ್ ಫೋನ್ ತಗೊಂಡ್ರೆ ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣ್ತಿದೆ. ಇದು ಬದಲಾವಣೆ ಪರ್ವ ಅಲ್ಲವೇ ಎಂದರು. ಸ್ಟೀಲ್ ನಲ್ಲಿ 14ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದೇವೆ. ಅಟೊಮೋಬೈಲ್‌ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.
ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ, ದೇಶದ ೧೨ ಕೋಟಿ ಮಹಿಳೆಯರಿಗೆ ಮನೆ ಕೊಟ್ಟಿದ್ದಾರೆ, ಕರ್ನಾಕದಲ್ಲಿ 27 ಲಕ್ಷ ಶೌಚಾಲಯ ಕೊಡುವ ಮೂಲಕ ಮಹಿಳಾ ಸಶಕ್ತಿಕರಣ ಮಾಡಿದ್ದಾರೆ ಎಂದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಯಾವುದೇ ಬಡವರು ಹಾಗೆ ಇರಬಾರದು ಎಂದು ಮೂರು ಕೋಟಿ ಮನೆ ನಿರ್ಮಿಸಿ ಕೊಡಲಾಗಿದೆ.
ಕರ್ನಾಟಕದಲ್ಲಿ ಎಂಟು ಲಕ್ಷ ಮನೆ ಕೊಡಲಾಗಿದೆ. ಆಯುಷ್ಯನ್ ಭಾರತ್ ಯೋಜನೆಯಲ್ಲಿ ಇಂದು ಭಾರತದ 50 ಪರ್ಸೆಂಟ್ ಜನರು, ಐದು ಲಕ್ಷ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಜಾರಿ ಮಾಡಲಾಗಿದೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ 8 ಲಕ್ಷ ಜನರು ಎರಡು ಸಾವಿರ ಹಣ ಪಡೆಯುತ್ತಿದ್ದಾರೆ.
ವಿಜಯಪುರದಲ್ಲಿ ಎರಡು ಲಕ್ಷ ರೈತರು ಕಿಸಾನ ಸಮ್ಮಾನ ಯೋಜನೆ ಲಾಭ ಪಡೆಯು ತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಮೂರು ದಿನಗಳ ಹಿಂದೆ ಕರ್ನಾಟಕದಲ್ಲಿ ಆಗಮಿಸಿ ಹಲವಾರು ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ. ಒಂದೇ ಭಾರತ್ ಯೋಜನೆ ಯಲ್ಲಿ ಭಾರತದಲ್ಲಿ 4೦೦ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ನಾನು ಬರುವಾಗ ನೋಡುತ್ತಿದ್ದೆ, ಪ್ರತಿ ರೋಡಗಳು ನಾಲ್ಕು ಲೈನ್ ಗಳಿಂದ ಕೂಡಿವೆ. ಇನ್ನೂ ಮುಂದೆ ಅವೆಲ್ಲ ಎಂಟು ಲೈನ್ ಗಳು ಆಗಲಿವೆ. ಕರ್ನಾಟಕದ ಬಗ್ಗೆ ಎರಡು ಮಾತು ಹೇಳ್ತೆನೆ.
ಮುಖ್ಯಮಂತ್ರಿ ವಿದ್ಯಾನಿಧಿಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ದಲಿತರಿಗೆ, ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿದ್ದು ಬಹಳ ದೊಡ್ಡ ಕಾರ್ಯ ಎಂದರು. ಅಭಿವೃದ್ಧಿ ಎಂದರೆ ಬಿಜೆಪಿ, ಪಾರದರ್ಶಕತೆ ಎಂದರು.
ನೋಡಿ ಈ ಬೆರಳಿನಲ್ಲಿ ಬಹಳ ಶಕ್ತಿ ಇದೆ. ಈ ಬೆರಳು ಸರಿಯಾದ ಜಾಗಕ್ಕೆ ಒತ್ತಿದ್ರೆ ಒಳಿತಾಗುತ್ತದೆ. ತಪ್ಪು ಜಾಗಕ್ಕೆ ಒತ್ತಿದ್ರೆ ಅನಾಹುತ ಆಗುತ್ತದೆ. ಭಾರತದಲ್ಲಿ ವ್ಯಾಕ್ಷಿನೇಷನ್ ಮೂಲಕ ಮೋದಿ ಸುರಕ್ಷಾ ಚಕ್ರ ಕೊಟ್ಟಿದ್ದಾರೆ. ಹಾಗಾಗಿ ತಾವೆಲ್ಲರೂ ಮಾಸ್ಕ್ ಇಲ್ಲದೆ ಕೂತಿದಿರಿ ಭಾರತದಿಂದ 1೦೦ದೇಶಗಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ಅದರಲ್ಲಿ 50 ದೇಶಗಳಿಗೆ ಉಚಿತವಾಗಿ ಕೊಡಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ರು. ಯಾವ ದೇಶದ ಪ್ರಧಾನಿ ಆ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ಮಾಡಿದ್ರು. ಆದ್ರೆ ಮೋದಿ ಪುತಿನ್ ಗೆ ಕರೆ ಮಾಡಿ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತರಲಾಯಿತು ಎಂದರು.