ವೀರಶೈವ ಪರಮದ ನಿರ್ಮಾತೃ ಹಾನಗಲ್ಲ ಕುಮಾರ ಶ್ರೀಗಳು : ಎ.ಎಸ್. ಗಾಣಗೇರ..
ಇಂಡಿ : 20ನೇ ಶತಮಾನದಲ್ಲಿ ಈ ಭೂಮಿಗೆ ಅವತರಿಸಿ ಬಂದ ಹಾನಗಲ್ಲ ಕುಮಾರ ಸ್ವಾಮಿಗಳು ವೀರಶೈವ ಧರ್ಮದ ನಿರ್ಮಾತೃ ಎಂದು ವಿಶ್ರಾಂತ ಪ್ರಾಚಾರ್ಯರಾದ ಪ್ರೊ ಎ ಎಸ್ ಗಾಣಿಗೇರ ಹೇಳಿದರು.
ಪಟ್ಟಣದ ಶ್ರೀ ಬಸವರಾಜೆಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೆಂದ್ರ ಗಜಾನನ ಯುವಕ ಮಂಡಳಿ ಇವರ ಸಹಯೋಗದಲ್ಲಿ ನಡೆದ 67ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳ ಜೀವನ ಮತ್ತು ಸಾಧನೆಯ ಕುರಿತು ಉಪನ್ಯಾಸ ನೀಡುತ್ತಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪ ಪೂ ಡಾ ಸ್ವರೂಪಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಿತಿ ಅಧ್ಯಕ್ಷ ಪ್ರೊ ಐ ಬಿ ಸುರಪುರ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ನಿಗಡಿ ಅವರು ತಮ್ಮ ತಂದೆಯವರಾದ ಲಿಂ.ಸಂಗಣ್ಣ ನಿಗಡಿ ಅವರ ಸ್ವರ್ಣಾರ್ಥ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿ, ಪ್ರಸಾದ ವ್ಯವಸ್ಥೆ ಮಾಡಿದ್ದರು.
ಇದೇ ಸಂದರ್ಭದಲ್ಲಿ ಡಿ ಫಾರ್ಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರಾಂಕ್ ಪಡೆದ ಕುಮಾರಿ ಚೈತನ್ಯ ಯಲಗುರೇಶ ದೇವೂರ ಅವರನ್ನು ಸತ್ಸಂಗದ ವತಿಯಿಂದ ಸನ್ಮಾನಿಸಲಾಯಿತು.
ಶಸಾಪ ಅಧ್ಯಕ್ಷ ಆರ್ ವಿ ಪಾಟೀಲ, ಕದಳಿ ವೇದಿಕೆ ಅಧ್ಯಕ್ಷ ಗಂಗಾಬಾಯಿ ಗಲಗಲಿ, ಪ್ರೊ ಎಂ ಜೆ ಪಾಟೀಲ, ಗಾಳಿಮಠ ಸರ್,ಶ್ರೀಮತಿ ಎನ್ ಟಿ ಸಂಗಾ, ಜಯಶ್ರೀ ಪತ್ತಾರ,ಬಿ ಎಸ್ ಪಾಟೀಲ, ಜಿ ಎಸ್ ವಾಲಿ, ಕೆ ಜಿ ನಾಟಿಕಾರ, ಶಿವಲಿಂಗಪ್ಪ ಪಟ್ಟದಕಲ್ಲ ಹೆಚ್ ಎಸ್ ಎಳೆಗಾಂವ,ಸಿ ಎಂ ಉಪ್ಪಿನ, ಎಸ್ ಎಸ್ ಈರನಕೆರಿ ಉಪಸ್ಥಿತರಿದ್ದರು.