ಇಂಡಿ : ತಾಲೂಕಿನ ತಾಂಬಾ ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಕಾಳಿಕಾ ಮಾತೆಯ ಅಗ್ನಿ ಜಾತ್ರಾ ಮಹೋತ್ಸವದ ಅಂಗವಾಗಿ ಹಲಿಗೆ ಮೇಳವನ್ನು ಇದೆ ಪ್ರಥಮ ಬಾರಿಗೆ ಸರಕಾರಿ ಗಂಡು ಮಕ್ಕಳ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ಜರಗಿತು ಎಂದು ಕಾರ್ಯಕ್ರಮದ ಆಯೋಜಕರು ಹಾಗೂ ಕರವೇ ಅಧ್ಯಕ್ಷ ಶಿವರಾಜ ಕೆಂಗನಾಳ ಹೇಳಿದರು.
ಈ ಕಾರ್ಯಕ್ರಮವನ್ನು ಗ್ರಾಮ ಪಾಚಾಯತ ಅಧ್ಯಕ್ಷರಾದ ರಾಚಪ್ಪ ಗಳೇದ ಹಲಿಗೆ ಭಾರಿಸುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿಗಳಾಗಿ ಮಲ್ಲಯ್ಯ ಸಾರಂಗಮಠ, ಶರಣು ವಾಲಿ, ಪ್ರಕಾಶ ಮುಂಜಿ, G Y ಗೋರನಾಳ,ರಾಮಚಂದ್ರ ದೊಡ್ಮನಿ, ಈರಣ್ಣ ಬ್ಯಾಕೋಡ, ರೇವಪ್ಪ ಹೊರ್ತಿ ಅನೇಕ ಗಣ್ಯಾತಿಗಣ್ಯರು ಹಾಗೂ ಗ್ರಾಮಸ್ತರು ಭಾಗವಹಿಸಿದ್ದರು.