ಡಿ-25-26 ರಂದು ವೀರಭದ್ರೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ
ಇಂಡಿ : ತಾಲೂಕಿನ ಸಾತಲಗಾಂವ ಪಿಐ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡಿ. 25 ಮತ್ತು 26 ರಂದು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ. 25 ರಂದು ರಾತ್ರಿ 10:00 ಘಂಟೆಗೆ ಅಗ್ನಿಪುಟವ ಕಾರ್ಯಕ್ರಮ ಹಾಗೂ ಭಜನೆ ಮತ್ತು ಡೊಳ್ಳಿನ ಕಾರ್ಯಕ್ರಮ ಜರುಗುತ್ತದೆ. ತದನಂತರ ಬೆಳಿಗ್ಗೆ ಡಿ.26 ರಂದು ಶ್ರೀ ಬಸವೇಶ್ವರ ದೇವಾಲಯದಿಂದ ಪಲ್ಲಕ್ಕಿ ಮತ್ತು ಪುರವಂದರ ಉತ್ಸವ ಸಕಲ ವಾದ್ಯ ವೈಭವಗಳೋಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ತದನಂತರ ವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪಿತನಂದರ ಮಧ್ಯಾಹ್ನ 1 ಗಂಟೆಗೆ ಅಗ್ನಿ ಪ್ರವೇಶ ಕಾರ್ಯಕ್ರಮ ನೆರೆವರೆಯುವುದು. ಅದೇ ದಿನ ರಾತ್ರಿ ಮಗ ಹೋದರು ಮಾಂಗಲ್ಯ ಬೇಕು ಎಂಬ ಕೌಟುಂಬಿಕ ಸುಂದರ ಸಮಾಜಿಕ ನಾಟಕ ಜರುಗುತ್ತದೆ ಎಂದು ಜಾತ್ರಾ ಕಮೀಟಿಯವರು ಪ್ರಕಟಣೆಗೆ ತಿಳಿಸಿದ್ದಾರೆ.