ಸಮರ್ಪಕ ಕುಡಿಯುವ ನೀರು ಸೇರಿದಂತೆ, ವಿವಿಧ ಬೇಡಿಕೆ ಆಗ್ರಹಿಸಿ ಮನವಿ: ಡಿ ಎಸ್ ಎಸ್ ಅಧ್ಯಕ್ಷ ಚಂದ್ರಶೇಖರ
ಇಂಡಿ : ಈ ಆಸ್ತಿ ಪತ್ರ, ಕಟ್ಟಡ ಪರವಾನಗಿ, ಹಿಂದುಳಿದ ವಾರ್ಡಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ಪ್ರತಿ ತಿಂಗಳ ದಿನಾಂಕ 5 ರ ಒಳಗಾಗಿ ಎಸಿ ಎಸ್ಟಿ ಖಾತೆಗೆ ನಿವ್ವಳ ಲಾಭದ ಹಣವನ್ನು ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸೋಮವಾರ ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ರಾಷ್ಟ್ರೀಯ ನಾಯಕರ, ಶರಣರ-ಸಂತರ ಜಯಂತಿ ಪ್ರಯುಕ್ತ ಎಲ್ಲಾ ವೃತಗಳಿಗೆ ಅಲಂಕಾರಗೊಳಿಸಬೇಕು. ಹಿಂದುಳಿದ ವಾರ್ಡ ನಂಬರ್ 16 ರಿಂ 20 ರವರೆಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಬೇಕು. ಮಾಹಿತಿ ಹಕ್ಕು ಅಧಿನಿಯಮ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳಿಗೆ ದಾಖಲೆ ಒದಗಿಸಬೇಕು. 20.10 ಖಾತೆಗೆ ಸರಕಾರದ ನಿರ್ದೇಶನದಂತೆ ಬಂದ ನಿವ್ವಳ ಲಾಭವನ್ನು ಎಸಿ ಎಸ್ಟಿ ಖಾತೆಗೆ ವರ್ಗಾವಣೆಗೊಳಿಸಬೇಕು. ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯದಲ್ಲಿ ಆಗುತ್ತೀರುವ ಅನಾನುಕೂಲ ಹಾಗೂ ಪ್ರತಿ ತಿಂಗಳು ವೇತನ ಸರಿಯಾಗಿ ಒದಗಿಸಬೇಕು. ನಗರದಲ್ಲಿ ವ್ಯಾಪಾರಸ್ಥರಿಗೆ ಪರವಾನಿಗೆ ಪತ್ರ ಕೊಡದೆ ವಿನಃ ಕಾರಣ ತೊಂದರೆಕೊಡುವುದು ನಿಲ್ಲಿಸಬೇಕು. ಹಿರೇ ಇಂಡಿ ರಸ್ತೆಗೆ ಮುಳ್ಳಿನ ಗಿಡಗಳು ಹಾಗೂ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇವುಲ್ಲವೂ ತುರ್ತಾಗಿ ಪರಿಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದರೆ ದೊಡ್ಡ ಪ್ರಮಾಣ ಪತ್ರಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಮರ ಬಾಸುತಕರ, ಚನ್ನಪ್ಪ ನಡಗಡ್ಡಿ, ಪ್ರದೀಪ ಡೊಳ್ಳಿನ, ಅವಿನಾಶ್ ಶಿಂಧೆ, ಕಿರಣ ಕಟ್ಟಿಮನಿ, ಸಂತೋಷ ಕಾಳೆ, ದಯಾನಂದ ಹೊಸಮನಿ, ಸಂಜು ಭತಗುಣಕಿ, ಮಲ್ಲಿಕಾರ್ಜುನ ಹೊಸಮನಿ, ಬಸು ಡೊಳ್ಳಿನ, ವಿಶ್ವನಾಥ ವಾಘಮೋರೆ, ಸದ್ದಾಂ ಮಕಾನದಾರ, ಸಲೀಲ ಭಾಗವಾನ ,ಜಾವೀದ್ ನಾಗೂರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.