ಇಂಡಿ : ಧರ್ಮ ಅಧರ್ಮದ ಕುರಿತು ಇಡೀ ವಿಶ್ವಕ್ಕೆ ರಾಮಾಯಣ ಮಹಾಭಾರತದ ಕೃತಿಯ ಮೂಲಕ ತೋರಿಸಿಕೊಟ್ಟದ್ದು ವಾಲ್ಮೀಕಿ ಮಹರ್ಷಿ ಎಂದು ತಳವಾರ ಸಮುದಾಯದ ಮುಖಂಡ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಸ್.ತಳವಾರ ಮಾತಾನಾಡಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಡಂಗಿ ಮತ್ತು ಸೊಮಯ್ಯ ಮಠಪತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ತದನಂತರ ಗ್ರಾಮ ಪಂಚಾಯತ ಅಧ್ಯಕ್ಷ ವಿವಿಧ ಸಮುದಾಯದ ಮುಖಂಡರಿಗೆ ವಾಲ್ಮೀಕಿ ಮಹರ್ಷಿ ಭಾವಚಿತ್ರವಿರುವ ಪೋಟೊಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ತಳವಾರ ಸಮುದಾಯದ ಯುವ ಮುಖಂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶ್ರೀನಿವಾಸ ರೂಗಿ ಮಾತಾನಾಡಿದವರು, ಇವತ್ತಿನ ವಾಸ್ತವದಲ್ಲಿ ಸ್ವತಂತ್ರ ಹೋರಾಟಗಾರರನ್ನು, ಧರ್ಮಪ್ರಚಾರಕನ್ನು, ಸಂತ ಶರಣರನ್ನು, ಸಾಮಾಜಿಕ ಮೌಲ್ಯ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನ ಜಾತಿಯಿಂದ ಕಾಣುವ ಮನೋಭಾವನೆ ಬೆಳೆಯುತ್ತಿದೆ. ಇಂದು ಜಯಂತಿಯ ಆಚರಣೆಗಳು ಸಂಬಂಧಿಸಿದಪಟ್ಟ ಸಮುದಾಯಗಳಿಗೆ ಸೀಮಿತ ವಾಗುತ್ತಿವೆ.
ಇದು ಮಾನವ ಕುಲಕ್ಕೆ ದಕ್ಕೆ ತರುತ್ತೆದೆ. ಭವಿಷ್ಯದಲ್ಲಿ ಯುವ ಸಮುದಾಯಕ್ಕೆ ಮಾರಕವಾಗುತ್ತೆದೆ. ಒಂದು ವೇಳೆ ಜಾತಿಯ ಹೆಸರಲ್ಲಿ ಆಚರಣೆಗಳು ನಡೆದರೆ ನಮ್ಮ ದೇಶಕ್ಕೆ ನಾವೇ ಜಾತಿಯ ಕೊಳ್ಳಿಯಿಟ್ಟಂತೆ ಎಂದು ಹೇಳಿದರು. ಯಾವುದೇ ಒಬ್ಬ ವ್ಯಕ್ತಿಯನ್ನ ಜಾತಿಯಿಂದ ಕಾಣದೇ ಅವರು ಕೊಟ್ಟಿರುವ ಸಾಮಾಜಿಕ ಕೊಡುಗೆ ಮತ್ತು ಸಾಮಾಜಿಕ ಮೌಲ್ಯಗಳ ಸಿದ್ದಾಂತ ಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಭಗವಾನ್ ರಾಮನು ಪ್ರಪಂಚದಾದ್ಯಂತ ಹಿಂದೂಗಳಿಗೆ ಸ್ಫೂರ್ತಿಯಾಗಿದ್ದು ಮನಸ್ಸಿಂದ ಪೂಜಿಸಲ್ಪಡುತ್ತಾನೆ ಮತ್ತು ಅವನ ಜೀವನದ ಕಥೆಯನ್ನು ಭಾರತೀಯ ಸಮಾಜದಲ್ಲಿ ಹೆಚ್ಚು ಆಚರಿಸಲಾಗುತ್ತದೆ. ವಾಲ್ಮೀಕಿ ಜಯಂತಿಯಂದು ಹಿಂದೂಗಳು ಶ್ರೀರಾಮನ ಕಥೆಯನ್ನು ಜಗತ್ತಿಗೆ ಸಾರಿದ ವಾಲ್ಮೀಕಿ ಮಹರ್ಷಿಗೆ ಗೌರವ ಸಲ್ಲಿಸುತ್ತಾರೆ ಎಂದು ಹೇಳಿದರು.
ಗ್ರಾ.ಪ.ಸದಸ್ಯ ಬೀಮರಾಯ ಜೇವೂರ, ನಿಸಾರ ಬಾಗವಾನ, ಸುರೇಶ ದಳವಾಯಿ, ಇಮ್ರಾನ್ ಬುಡಕಿ ಹಾಗೂ ಪಿಕೆಪಿಎಸ್ ಮಾಜಿ ಅಧ್ಯಕ್ಷ ಮೋದಿನಸಾಬ್ ಬಾಗವಾನ, ಸಮುದಾಯದ ಹಿರಿಯ ಮುಖಂಡ ಲಕ್ಷ್ಮಣ ಡಂಗಿ, ಬಾಳಪ್ಪ ತಳವಾರ, ಪರಮೇಶ್ವರ ವಾಲಿಕಾರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.