ಇಂಡಿ: ಕೊವ್ಯಾಕ್ಸಿನ್ ಮಾದರಿಯಲ್ಲಿ ಈ ಲಸಿಕೆ ಪ್ರೌಢ ಶಾಲಾ ಮಕ್ಕಳಿಗೆ ನೀಡುವುದು ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವದಿಲ್ಲ. ಮಕ್ಕಳಲ್ಲಿ ಯಾವುದೇ ಭಯ ಬೇಡ ಎಂದು ಚಿಕ್ಕ ಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಲಸಿಕ ಶಿಬಿರದಲ್ಲಿ ಡಾ: ಪ್ರಶಾಂತ ಧೂಮ್ ಗೊಂಡ ಹೇಳಿದರು.
ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ವೈ ಎಂ ಪೂಜಾರ ಮಾತನಾಡಿ ಕೋರ್ಬಿ ವ್ಯಾಕ್ಸಿನ ಲಸಿಕೆ ಮುಂಬರುವ ಕೋರೋನ ಸಾಂಕ್ರಾಮಿಕ ರೋಗ ಹರಡದಂತೆ ಮಕ್ಕಳ ಜೀವ ರಕ್ಷಾ ಕವಚ. ಮುಂಜಾಗ್ರತ ಕ್ರಮವಾಗಿ ಲಸಿಕೆ ನೀಡಲಾಗುವುದು. ವಿನಾಕಾರಣ ತಪ್ಪುಕಲ್ಪನೆ ಮೂಢನಂಬಿಕೆಯಿಂದ ಮಕ್ಕಳ ಲಸಿಕೆ ವಂಚಿತರನ್ನಾಗಿ ಮಾಡಿ ಮಕ್ಕಳನ್ನು ಕಳೆದುಕೊಳ್ಳಬೇಡಿ. ಪ್ರಪಂಚದಲ್ಲಿ ಭಾರತ ದೇಶ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ. ಮಕ್ಕಳಿಗೆ ಲಸಿಕೆ ಚುಚ್ಚುಮದ್ದು ಹಾಕಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಎಸ್ ಎಚ ಅತನೂರ್, ಎಸ್ ಪತ್ತಾರ್, ಪಾರಮಶಿ ಅಧಿಕಾರಿ ಅಂಜುಟಗಿ, ಪಿಜಿಡಿ ಎಚ್ಪಿ ಮಂಜುಳಾ ಜೋಶಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ವಿದ್ಯಾಶ್ರೀ, ಪ್ರಯೋಗಾಲಯ ತಂತ್ರಜ್ಞ ದಿಕಾರಿ ಅಶೋಕ್ ಬಿರಾದರ್, ಶುಶ್ರೂಷಾ ಅಧಿಕಾರಿ ಗಣೇಶ್, ಸಂಜೀವ್, ಆಶಾ ಕಾರ್ಯಕರ್ತೆಯರಾದ ಮಂಗಲ, ಮೀನಾಕ್ಷಿ, ಅನಿತಾ, ಲಕ್ಷ್ಮಿ, ಉಪಸ್ಥಿತರಿದ್ದರು.