ಉಪ್ಪಾರ ಸಮುದಾಯ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ ಗೆಲುವಿಗೆ ಬೆಂಬಲಿಸಿ ಸಮಾವೇಶ..
ಇಂಡಿ : ಸಾಲೋಟಗಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಡಿ. ಪಾಟೀಲರ ಗೆಲುವಿಗೆ ತಾಲೂಕಿನ ಉಪಾರ ಸಮುದಾಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ಹಿಂದೂಳಿದ ಉಪ್ಪಾರ ಸಮುದಾಯದ ಬೇಕು ಬೇಡಿಕೆಗಳ ಬಗ್ಗೆ ನಾನು ಸಾಮಾಜಿಕ ನ್ಯಾಯದ ಪರವಾಗಿ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ಬಡತನವನ್ನು ಲೇಖಿಸದೆ ನನ್ನಂತ ಹೋರಾಟಗಾರನ್ನು ಬೆಂಬಲಿಸಲು ನಿರ್ಧರಿಸಿದ್ದು ನಾನು ಮರೆಯಲಾರೆ ಎಂದು ಮಾತನಾಡಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಬಸವರಾಜ ಖಸ್ಕಿ, ಮಳುಸಾವುಕಾರ ಬ್ಯಾಳಿ, ಭೀಮರಾಯ ಕಟ್ಟಿ, ಅನೀಲ ರೇಬಿನಾಳ, ಚಿದಾನಂದ ಉಪ್ಪಾರ, ಶಿವು ಉಪ್ಪಾರ, ಅಂಬಣ್ಣ ಉಪ್ಪಾರ, ವಿಜಯಕುಮಾರ ನರಳೆ, ವಿಶ್ವನಾಥ್ ನರಳೆ, ನಿಂಗಪ್ಪ ಪೂಜಾರಿ, ಭೀಮರಾಯ ಉಪ್ಪಾರ, ಮುಂತಾದ ನಾಯಕರು ಉಪಸ್ಥಿತರಿದ್ದರು.