ಅಕಾಲಿಕ ಮಳೆ : ತೋಟಗಾರಿಕೆ ಬೆಳೆಹಾನಿ..!
ಇಂಡಿ : ತಾಲೂಕಿನಲ್ಲಿ ಮಳೆ ಮತ್ತು ಬಿರುಗಾಳಿ ಬೀಸಿದ್ದರಿಂದ ಅಲ್ಲಲ್ಲಿ ತೋಟಗಾರಿಯ ಗಿಡಗಳು ಬಿದ್ದಿದ್ದು ರೈತರಿಗೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ತಿಳಿಸಿದ್ದಾರೆ.
ತಾಲೂಕಿನ ರೂಗಿ ಗ್ರಾಮದ ರೈತ ವಿಠೋಬಾ ಬಂಡೆಪ್ಪ ಧನಗರ ಇವರಿಗೆ ಸೇರಿದ ತೋಟದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಅಂದಾಜು 50 ನಿಂಬೆ ಬೆಳೆ ಗಿಡಗಳು ಬಿದ್ದು ಹಾನಿಯಾಗಿದೆ. ಅದಲ್ಲದೆ ಅನೇಕ ಗ್ರಾಮಗಳಲ್ಲಿ ತೋಟಗಾರಿಕೆ ಸಂಬಂದಿತ ಗಿಡಮರಗಳು ಬಿರುಗಾಳಿಗೆ ಬಿದ್ದಿವೆ. ಅದಲ್ಲದೆ ರೈತರು ಅಲ್ಲಲ್ಲಿ ಜೋಳದ ಕಣಿಕೆ
ಮೇಲೆ ಮುಚ್ಚದಿರುವದರಿಂದ ಕಣಿಕೆ ಹಾಳಾಗಿದೆ.
ತಾಲೂಕಿನಲ್ಲಿಯ ಹಾನಿ ಕುರಿತು ಮೇಲಾಧಿಕಾರಿಗಳ
ಗಮನಕ್ಕೆ ತಂದು ಜಿಲ್ಲಾಧಿಕಾರಿಗಳಿಗೆ ವರದಿ
ಸಲ್ಲಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಇಂಡಿ ತಾಲೂಕಿನ ರೂಗಿ ಗ್ರಾಮದ ಧನಗರ ಇವರ
ತೋಟದಲ್ಲಿ ಬಿದ್ದ ನಿಂಬೆ ಗಿಡಗಳು