ಲಿಂಗಸೂಗೂರು: ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯ ಆಮದಿಹಾಳ ಗ್ರಾಮದ ಬಳಿ ತೊಗರಿ ಬೆಳೆಯ ಜಮೀನುವೊಂದರಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ.
ಶವ ಪತ್ತೆಯಾದ ವ್ಯಕ್ತಿಯ ಬಲಗೈಯಲ್ಲಿ ಬೆಳ್ಳಿಯ ಕಡಗ ವಿದ್ದು, ನೀಲಿ ಬಣ್ಣದ ಲುಂಗಿಯನ್ನು ಧರಿಸಿದ್ದು 55 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಸಧ್ಯ ಅಪರಿಚಿತ ವ್ಯಕ್ತಿಯ ಶವವನ್ನು ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪರೀಕ್ಷೆಗಾಗಿ ಇರಿಸಲಾಗಿದೆ. ಇನ್ನು ಮುದಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.