ಉಡುಪಿ : ಅಪರ ಜಿಲ್ಲಾಧಿಕಾರಿಯಾಗಿ ಅಬೀದ್ ಗದ್ಯಾಳ ಅಧಿಕಾರ ಸ್ವೀಕಾರ
Voiceofjanata.In : Editor : ಉಡುಪಿ, ಫೆ.26: ಉಡುಪಿಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಅಬೀದ ಗದ್ಯಾಳ ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ್ದಾರೆ.
ಈ ಮೊದಲು ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ವಿಭಾಗಾಧಿಕಾರಿಯಾಗಿ ಹಾಗೂ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಅಬೀದ ಗದ್ಯಾಳ ಇವರು ಉಡುಪಿ ಜಿಲ್ಲೆಯ ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ನಾಗರಾಜ ನಾಯಕ್ರಿಂದ ಅಧಿಕಾರ ಸ್ವೀಕರಿಸಿದರು.


















