ಅ- 9 ರಂದು ಎರಡು ನಕ್ಷತ್ರಗಳು ಕೃತಿ ಲೋಕಾರ್ಪಣೆ
ಇಂಡಿ : ಪ್ರೊ ಎಸ್ ಎಸ್ ಈರನಕೇರಿ ಅವರ ವಿರಚಿತ “ಎರಡು ನಕ್ಷತ್ರಗಳು” ಎಂಬ ಕೃತಿ ಅ- 9 ರಂದು ಸಾಯಂಕಾಲ 6 ಘಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಪಟ್ಟಣದ ಶ್ರೀ ಬಸವರಾಜೇಂದ್ರ ದೇವಸ್ಥಾನ ಆವರಣದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನ ಯುವಕ ಮಂಡಳಿ, ಶ್ರೀ ಅರವಿಂದೊ ಸೊಸೈಟಿ ಕೇಂದ್ರದ ಸಹಯೋಗದಲ್ಲಿ ಜರುಗಲಿರುವ “96 ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ” ನಿಮತ್ಯೆ ಶಂಕರರಾವ್ ಕುಲಕರ್ಣಿ ಅವರ ಪುಣ್ಯ ಸ್ಮರಣೆ ಹಾಗೂ ಎರಡು ನಕ್ಷತ್ರಗಳು ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಈ ಸಂದರ್ಭದಲ್ಲಿ ದಿವ್ಯಸಾನಿಧ್ಯ ಶ್ರೀ ಪ.ಪೂ ಡಾ.ಅಭಿನವ ಸಿದ್ದರಾಮೇಶ್ವರರು, ಅಧ್ಯಕ್ಷತೆ ಎನ್ ವ್ಹಿ ಹಂಜಗಿ, ಮುಖ್ಯ ಅತಿಥಿ ಪ್ರೊ ಎಸ್ ಎಮ್ ಜೋಳಕೆ, ಅತಿಥಿ ಎಸ್ಎಸ್ ರೆವಣ್ಣವರ ಹಾಗೂ ಸನ್ಮಾನಿತರಾಗಿ ಆರ್ ವ್ಹಿ ಪಾಟೀಲ ಪಾಲ್ಗೊಳ್ಳಲಿದ್ದಾರೆಂದು ಆಡಳಿತ ಮಂಡಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.