“ಎರಡು ನಕ್ಷತ್ರಗಳು ಕೃತಿ “ಸರ್ವೇ ಜನ ಸುಖಿನೋ ಭವಂತು ಎಂಬ ತತ್ವ ಒಳಗೊಂಡಿದೆ
ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಸಹಯೋಗ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಾಗೂ ಶ್ರೀ ಅರವಿಂದೊ ಸೊಸೈಟಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ 96ನೇ ಹುಣ್ಣಿಮೆ ಬೆಳಕು ಶರಣರ ಸಂದೇಶ ಕಾರ್ಯಕ್ರಮದಲ್ಲಿ ಕೈಲಾಸವಾಸಿ ಶ್ರೀ ಶಂಕರ್ ರಾವ್ ಕುಲಕರ್ಣಿ ಹಾಗೂ ಉಪನ್ಯಾಸಕ ಸದಾನಂದ ಎಸ್ ಈರನಕೇರಿ ಅವರ ವಿರಚಿತ ಎರಡು ನಕ್ಷತ್ರಗಳು ಎಂಬ ವ್ಯಕ್ತಿ ಚಿತ್ರಣ ಪುಸ್ತಕ ಲೋಕಾರ್ಪಣೆಯಗೊಳಿಸಿದರು.
ಎಸ್ ಆರ್ ಮಾಸ್ತರ್ ಎಂದು ಹೆಸರುವಾಸಿಯಾದ ಸಂಗಮೇಶ್ವರ ರೇವಣ್ಣವರ್ ಹಾಗೂ ಶರಣಬಸವ ಈರನಕೇರಿ ಇವರು ಬಾಳಿ ಬದುಕಿದ ವ್ಯಕ್ತಿ ಚಿತ್ರಣ ಇದಾಗಿದೆ. ಇರ್ವರು ಶರಣ ತತ್ವವನ್ನು ಅಳವಡಿಸಿಕೊಂಡು, ನಿಸ್ವಾರ್ಥ ಸೇವೆಯನ್ನು ಮಾಡುತ್ತ ನಮಗೆಲ್ಲರಿಗೂ ದಾರಿ ದೀಪ ವಾಗಿದ್ದಾರೆ, ಎಂದು ಕೃತಿಯ ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ, ಪ್ರೊ ಎಸ್ ಎಂ ಚೋಳಕೆ ಮಾತನಾಡಿದ ಅವರು, ಅರವಿಂದರ ಜೀವನ ಮತ್ತು ಸಾಧನೆ ಕುರಿತು, ಕವಿಗಳು ದಾರ್ಶನಿಕರು ತಪಸ್ವಿಗಳಾಗಿದ್ದ ಶ್ರೀಗಳವರ ವಿಚಾರಗಳು ನಾವೆಲ್ಲ ಅನುಸರಿಸಿಕೊಂಡು ಹೋಗಬೇಕು. ಸ್ವಾತಂತ್ರ್ಯ ಸಿಗುವಲ್ಲಿ ಅರವಿಂದರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಪ್ರೊ ಎನ್ ವಿ ಹಂಜಗಿ ಮಾತನಾಡುತ್ತಾ ನಾವೆಲ್ಲರೂ ಅರವಿಂದರ ಹಾಗೂ ಶ್ರೀಮಾತೆಯವರ ಆದರ್ಶದ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಸಹಿತ ನಿಸ್ವಾರ್ಥ ಸೇವೆಯನ್ನ ಮಾಡಬೇಕು. ಪಾಂಡಿಚೇರಿಯ ಆಶ್ರಮವನ್ನು ನಾವೆಲ್ಲರೂ ನೋಡಿಕೊಂಡು ಬರಬೇಕು. ಧಾರ್ಮಿಕ ಅಧ್ಯಾತ್ಮಿಕ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಆರ್ ವಿ ಪಾಟೀಲ್ ಇವರಿಗೆ ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸತ್ಸಂಗದ ಸಮಿತಿ ವತಿಯಿಂದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಅತಿಥಿ ಎಸ್ ಎಸ್ ರೇವಣ್ಣವರ್ ಉಪಸ್ಥಿತರಿದ್ದರು.
ಪ್ರಾರ್ಥನಾ ಗೀತೆ ಕೀರ್ತಿ ಮತ್ತು ದೀಪಾ ಹಾಡಿದರು. ಶಿಕ್ಷಕ ಬಿ ಎಸ್ ಪಾಟೀಲ್ ನಿರೂಪಿಸಿದರು. ಶಿಕ್ಷಕ ಬುರುಕುಲೆ
ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಜೀವಿಗಳು, ಉಪನ್ಯಾಸಕರು, ಶರಣ ಶರಣೀಯರು, ಹಾಗೂ ಮುದ್ದು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.