ಲಿಂಗಸಗೂರು: ಬಿಸಿಲನಾಡು ರಾಯಚೂರ ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದ ಎ. ಪಿ. ಎಂ ಸಿ ಬಳಿ ಇರುವ ಲಕ್ಷ್ಮೀಪತಿ ಲೇಔಟ್ ನಲ್ಲಿ ವಿದ್ಯುತ್ ಸ್ಪರ್ಶಕ್ಕೆ 40 ಸಾವಿರ ರೂ ಬೆಲೆ ಬಾಳುವ ಎರಡು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮುದುಗಲ್ ನಿವಾಸಿಯಾದ ರೈತ ಶಂಕರಪ್ಪ ಸುಮಾರು ಎರಡು ನೂರು ಕುರಿಗಳನ್ನು ಲಕ್ಷ್ಮಿಪತಿ ಲೇಔಟ್ ಮೇಯಿಸಲು ಬಿಟ್ಟಿದ್ದ. ಎರಡು ಕುರಿಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ಇನ್ನು ಮೂಖ ಜೀವಿಗಳು ಕುರಿಗಾಯಿಯ ಮುಂದೆ ನರಳಾಡಿ ಪ್ರಾಣವನ್ನ ಬಿಟ್ಟಿವೆ. ಟ್ರಾನ್ಸ್ ಫಾರ್ಮರ್ ವಿದ್ಯುತ್ ಸ್ಪರ್ಶದಿಂದ ಕುರಿಗಳನ್ನ ತಡೆಯಲು ಹೋದ ಕುರಿಗಾಯಿಯನ್ನ ಸ್ಥಳೀಯರು ತಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಕೆಲ ಕಾಲ ಜೇಸ್ಕಾಂ ಅಧಿಕಾರಿಗಳು ಮತ್ತು ಸಂಘಟನೆಯವರ ನಡುವೆ ವಾಗ್ವಾದ ನಡೆಯಿತು.
ಸ್ಥಳೀಯ ಮುದ್ಗಲ್ ಪಟ್ಟಣ ಪಂಚಾಯಿತಿ ಆಡಳಿತದ ಕಾರ್ಯ ವೈಫಲ್ಯ್ ದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.