ಚುನಾವಣೆ ಐಡಿಗಾಗಿ ಎರಡು ಫೋಟೋ ಕಡ್ಡಾಯ
ಇಂಡಿ : ಇಂದು ನಡೆಯುವ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಗುರುತಿನ ಪತ್ರ ಇಲ್ಲದವರು ಎರಡು ಪೋಟೋ ತರಬೇಕು ಎಂದು ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ಗುರುತಿನ ಪತ್ರ ಇಲ್ಲದವರಿಗೆ ಮತ ನೀಡಲು ಅವಕಾಶವಿಲ್ಲ. ಹೀಗಾಗಿ ಎರಡು ಫೋಟೋ ತಂದರೆ
ಮೊದಲು ಗುರುತಿನ ಪತ್ರ ಪಡೆದು ನಂತರ ಮತದಾನಕ್ಕೆ ಅವಕಾಶ ಕೊಡಲಾಗುವದೆಂದು ಗದ್ಯಾಳ ತಿಳಿಸಿದ್ದಾರೆ.
ಅದಲ್ಲದೆ ಮತದಾನಕ್ಕೆ ಆಧಾರ ಕಾರ್ಡ ಅಥವಾ
ಯಾವದೇ ಗುರುತಿನ ಚೀಟಿ ತಂದು ಮತ
ಸಲ್ಲಿಸಬಹುದಾಗಿದೆ ಎಂದು ಗದ್ಯಾಳ ತಿಳಿಸಿದ್ದಾರೆ.
ಅದಲ್ಲದೆ ಚುನಾವಣೆ ನಡೆಯುವ ಮರಗೂರ ಸಕ್ಕರೆ ಕಾರ್ಖಾನೆಯ ಸಿದ್ದೇಶ್ವರ ಗೋದಾಮಿನ ಸುತ್ತಲೂ 500 ಮೀ ವ್ಯಾಪ್ತಿಯಲ್ಲಿ 144 ಅಡಿ ನಿಷೇದಾಜ್ಞೆ
ಇದೆ ಎಂದು ಗದ್ಯಾಳ ತಿಳಿಸಿದ್ದಾರೆ. ಚುನಾವಣೆ ಗೋದಾಮಿನಲ್ಲಿ ಬೆಳಗ್ಗೆ 9 ರಿಂದ 4 ಗಂಟೆಯ ವರೆಗೆ ನಡೆಯಲಿದ್ದು ಸಂಜೆಯೇ ಫಲಿತಾಂಶ ನೀರಿಕ್ಷಿಸಲಾಗಿದೆ ಎಂದು ಗದ್ಯಾಳ ತಿಳಿಸಿದ್ದಾರೆ.