ರಾಯಚೂರು : ರಾಜ್ಯದಲ್ಲಿ ನೀರಾವರಿ ಯೋಜನೆಗಳ ಜಾರಿಗಾಗಿ ಪಕ್ಷವು ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆಯು ಮಾಡಲಾಗುತ್ತಿದ್ದು, ಈ ಅಭಿಯಾನ ಯಶಸ್ಸಿಗೆ ಕಾರ್ಯಕರ್ತರು ಸಹಕರಿಸಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮನವಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುನಿರಬಾದ ಡ್ಯಾಂ ನಲ್ಲಿ ಉದ್ಘಾಟನೆ ಯಾಗಿರುವ ಜನತಾ ಜಲಧಾರೆ ಯಾತ್ರೆ ಸಿಂಧನೂರಿಗೆ ಬಂದು ಸೇರಿದೆ. ಸಿಂಧನೂರು ನಿಂದ ನಾಳೆ ಮಾನ್ವಿ ಗೆ ಬಂದು 2 ದಿನ ಸಂಚರಿಸಲಿದೆ. ನಂತರ 25 ಕ್ಕೆ ನಗರಕ್ಕೆ ಬರಲಿದ್ದು, ನಗರದ ರಂಗಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನತಾ ಜಲಧಾರೆ ಯಾತ್ರೆ ಸುಮಾರು 94 ನದಿಗಳ ನೀರನ್ನು ಸಂಗ್ರಹಿಸಿ 180 ಕ್ಷೇತ್ರಗಳಲ್ಲಿ ಸಂಚರಿಸಿ ರಾಜ್ಯದ ಪವಿತ್ರವಾದಂತ ಜಲವನ್ನು ಹನಿ ನೀರನ್ನು ಕೂಡ ನಾವು ಕುದಿಯುವಕ್ಕೆ ಮತ್ತು ವ್ಯವಸಾಯಕ್ಕೆ ಸಮಗ್ರವಾಗಿ ಉಪಯೋಗಿಸುತ್ತೇವೆ ಎಂದು ಆಲೋಚನೆಯಿಂದ ಇವತ್ತು ಜನತಾ ಜಲಧಾರೆ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಇರುವ 94 ನದಿಗಳ ನೀರು ಸಾಕಷ್ಟು ಪೋಲಾಗಿ ಬೇರೆ ನದಿಗಳಿಗೆ ಹೋಗುತ್ತಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಮತ್ತು ಆಶೀರ್ವಾದ ನೀಡಿದರೆ ರಾಜ್ಯದ ಪ್ರತಿಯೊಂದು ಹನಿ ನೀರನ್ನು ಕೂಡ ವ್ಯವಸಾಯಕ್ಕೆ ಮತ್ತು ಕುಡಿಯುವ ನೀರನ್ನು ಸಮಗ್ರವಾದ ಉಪಯೋಗ ಮಾಡುತ್ತೇನೆ ಎಂದು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಹಸಿರು ಕ್ರಂತಿಯಾಗಿ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.ಸಮಾರೋಪ ಸಮಾರಂಭಕ್ಕೆ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ್ ಅತ್ತನೂರು,ಯೂಸುಫ್ ಖಾನ್, ಎನ್.ಶಿವಶಂಕರ್ ಸೇರಿದಂತೆ ಇತರರು ಇದ್ದರು.