ಸಕ್ರೀಯ ಕ್ಷಯ ರೋಗ ಪತ್ತೆ ಆಂದೋಲನ
ಇಂಡಿ: ಕ್ಷಯ ರೋಗದಿಂದ ಬಳಲುತ್ತಿರುವವರಿಗೆ
ಸೂಕ್ತ ಉಚಿತ ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ
ಮೂಲಕ ರೋಗ ನಿವಾರಣೆಗೆ ಒತ್ತು ನೀಡಬೇಕು ಎಂದು
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು.
ಶುಕ್ರವಾರ ಪಟ್ಟಣದ ಡಿ. ದೇವರಾಜ ಅರಸು ಮೆಟ್ರೀಕ್
ಪೂರ್ವ ವಸತಿ ನಿಲಯದಲ್ಲಿ ಹಮ್ಮಿಕೊಂಡ ಸಕ್ರೀಯ ಕ್ಷ
ಯ ರೋಗ ಪತ್ತೆ ಆಂದೋಲನದ ಕುರಿತ ಮಕ್ಕಳಿಗೆ
ಮಾಹಿತಿ ನೀಡಿದರು. ಕ್ಷಯ ರೋಗ ಬಾರದಂತೆ ತಡೆಯಲು ಜನರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದ ಅವರು, ಎರಡು ವಾರಕ್ಕಿಂತ ಹೆಚ್ಚಿನ ಅವಧಿಗೆ ಕೆಮ್ಮು ರಾತ್ರಿ ವೇಳೆ ಜ್ವರ ಬರುವುದು, ಮೈ ಬೆವರುವದು ,ಹಸಿವಾಗದೇ ಇರುವದು, ತೂಕ ಇಳಿಯುವದು, ಕಪ್‍ದಲ್ಲಿ ರಕ್ತ ಬೀಳುವದು
ಕ್ಷಯರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು.
ಸಾಮಾಜಿಕ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ
ಮನೆಗಳಿಗೆ ಭೇಟಿ ನೀಡಿ. ಸಕ್ರೀಯ ಕ್ಷಯ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು ಸೇವಾವಲಯದವರೆ ರೋಗಿಗಳ ಮನೆಯ ಭೇಟಿ ನೀಡಿ ಚಿಕಿತ್ಸೆ ನೀಡುವದು ಆಂದೋಲನದ ವಿಶೇಷತೆ ಆಗಿದೆ. ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆಯ ಭೇಟಿ ನೀಡಿ ಸೂಕ್ತ ಮಾಹಿತಿ ನೀಡುತ್ತಾರೆ ಎಂದರು. ಭಾರತ ದೇಶವನ್ನು 2025ಕ್ಕೆ ಕ್ಷ ಯರೋಗ ಮುಕ್ತ ಭಾರತ ಮಾಡಲು ಎಲ್ಲರೂ ಕೈಜೋಡಿಸಬೇಕು. ನಿಮ್ಮ ಮನೆಗೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವೀಚಾರಕ
ಎಸ್.ಆಯ್. ಸುಗೂರ, ದೀಪಾ ಹೂಗಾರ ಹಾಗೂ ವಸತಿ
ನಿಲಯದ ಅಡುಗೆ ಸಹಾಯಕರು ವಿದ್ಯಾರ್ಥಿನಿಯಯಿದ್ದರು.
ಇಂಡಿ: ಪಟ್ಟಣದ ಡಿ. ದೇವರಾಜ ಅರಸು ಮೆಟ್ರೀಕ್ ಪೂರ್ವ ವಸತಿ ನಿಲಯದಲ್ಲಿ ಹಮ್ಮಿಕೊಂಡ ಸಕ್ರೀಯ ಕ್ಷ ಯರೋಗ ಪತ್ತೆ ಆಂದೋಲನದ ಕುರಿತು ಮಕ್ಕಳಿಗೆ ಪೋಸ್ಟರ ನೀಡುವುದರ ಮೂಲಕ ಸುನಂದಾ ಅಂಬಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.