ಕೊಳವೆ ಬಾವಿ ದುರಂತ : ಸಾವು ಗೆದ್ದಿ ಬಂದ ಸಾತ್ವಿಕ್..
ಇಂಡಿ : ನಿರಂತರ 20 ಗಂಟೆಗಳ ಕಾರ್ಯಾಚರಣೆ ಬಳಿಕ ಸಾವು ಗೆದ್ದಿ ಬಂದ ಸಾತ್ವಿಕ್.. ಹೌದು..! ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದ್ದ ಕೊಳವೆ ಬಾವಿ ದುರಂತದಲ್ಲಿ ಸಾತ್ವಿಕ ಮೃತ್ಯುಂಜಯನಾಗಿ ಹೊರಬಂದಿದ್ದಾನೆ. ಬೋರ್ ವೆಲ್ ನಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆಯನ್ನು 20 ಗಂಟೆಗಳ ಕಾಲದ ನಿರಂತರ ಕಾರ್ಯಾಚರಣೆಯಲ್ಲಿ NDRF, SDRF, ಪೊಲೀಸರು, ಅಗ್ನಿಶಾಮಕ ದಳದವರ ಕಾರ್ಯಾಚರಣೆಯಿಂದ ಸಾತ್ವಿಕ ವಿಜಯಶಾಲಿ ಆಗಿದ್ದಾನೆ. ಇನ್ನು ಕಾರ್ಯಾಚರಣೆಗೆ ಸಾರ್ವಜನಿಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.