ರಕ್ಷಣಾ ಸಿಬ್ಬಂದಿಗೆ ಜಿಲ್ಲಾ ಆಡಳಿತದಿಂದ ಸನ್ಮಾನ
ಇಂಡಿ: ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ ಇವನನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಕಾರ್ಯಾಚರಣೆ ತಂಡವನ್ನು ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು. ಕಾರ್ಯಾಚರಣೆಯಲ್ಲಿ ಹೈದ್ರಾಬಾದದ 21 ಜನರ ಎನ್‍ಡಿಆರ್‍ಎಫ್ ತಂಡ, ಬೆಳಗಾಂವ ಮತ್ತು ಕಲಬುರಗಿಯಿಂದ ಬಂದ 25 ಜನರ ಎಸ್‍ಡಿಆರ್‍ಎಫ್ ತಂಡ,50 ಜನ ಪೋಲಿಸರು, 20 ಜನ ಗೃಹ ರಕ್ಷಕದಳದ ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಇವರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್,ಸಿಇಒ ರಿಷಿ ಆನಂದ, ಎಸಿ ಅಬೀದ್ ಗದ್ಯಾಳ ಸನ್ಮಾನಿಸಿದರು.
ಕಾಯಾಚರಣೆ ತಂಡವನ್ನು ಜಿಲ್ಲಾದಿಕಾರಿ ಭೂಬಾಲನ್
ಮತ್ತು ಎಸಿ ಅಬೀದ್ ಗದ್ಯಾಳ ಸನ್ಮಾನಿಸಿದರು.
ಕಾಯಾಚರಣೆ ತಂಡವನ್ನು ಜಿಲ್ಲಾದಿಕಾರಿ ಭೂಬಾಲನ್
ಮತ್ತು ಎಸಿ ಅಬೀದ್ ಗದ್ಯಾಳ ಸನ್ಮಾನಿಸಿದರು
.